Select Page

Advertisement

ಅಥಣಿ : ಭೀಕರ ರಸ್ತೆ ಅಪಘಾತ ; ಮಹಿಳೆ ಸಾವು

ಅಥಣಿ : ಭೀಕರ ರಸ್ತೆ ಅಪಘಾತ ; ಮಹಿಳೆ ಸಾವು



ಅಥಣಿ : ಬೈಕ್ ಹಾಗೂ ಕಾರಿನ‌ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಮೃತಪಟ್ಟ ಘಟನೆ ಅಥಣಿ ಪಟ್ಟಣದ ಪಾರ್ಥನಹಳ್ಳಿ‌ ರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.

ದರೂರ ಗ್ರಾಮದ ಸುಂದ್ರವ್ವ ಕಲ್ಲೊಳ್ಳಿ (72) ಮೃತ ದುರ್ದೈವಿ. ‌ಗುಂಡೆವಾಡಿ ಯಿಂದ ಅಥಣಿ ಕಡೆಗೆ ಬೈಕ್ ಮೇಲೆ ಬರುವ ವೇಳೆ ಅಜಾಗರೂಕತೆಯಿಂದ ಕಾರಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಬೈಕ್ ಹಿಂಬದಿ ಕುಳಿತಿದ್ದ ಸುಂದ್ರವ್ವ ಮೃತಪಟ್ಟಿದ್ದಾರೆ.

ಬೈಕ್ ಸವಾರ ಬಸಪ್ಪ ಕಲಮನಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.‌ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!