Select Page

Advertisement

ಪ್ರತಿಭಟನೆ ವೇಳೆ ಪಿಎಸ್ಐ ಕಪಾಳಕ್ಕೆ ಹೊಡೆದ ಸ್ವಾಮೀಜಿ – Video

ಪ್ರತಿಭಟನೆ ವೇಳೆ ಪಿಎಸ್ಐ ಕಪಾಳಕ್ಕೆ ಹೊಡೆದ ಸ್ವಾಮೀಜಿ – Video



ವಿಜಯಪುರ : ಸಚಿವ ಎಂ.ಬಿ ಪಾಟೀಲ ಮನೆ ಮುಂದೆ ಪ್ರತಿಭಟನೆ ಮಾಡುವ ವೇಳೆ ಸ್ವಾಮೀಜಿ ಓರ್ವ ಪಿಎಸ್ಐ ಕಪಾಳಕ್ಕೆ ಹೊಡೆದ ಘಟನೆ ನಡೆದಿದೆ.

ವಿಜಯಪುರದಲ್ಲಿ‌ ಖಾಸಗಿ ಮೆಡಿಕಲ್ ಕಾಲೇಜು ವಿರೋಧಿಸಿ ಸಚಿವ ಎಂ.ಬಿ ಪಾಟೀಲ ಮನೆ ಎದುರು ಹೋರಾಟಗಾರರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ಪ್ರತಿಭಟನೆ ಮಾಡುತ್ತಿದ್ದ ಬಸವನಬಾಗೇವಾಡಿ ತಾಲೂಕಿನ ಪಿ ಬಿ ಹುಣಶ್ಯಾಳ ಮಠದ
ಸಂಗನಬಸವೇಶ್ವರ ಸ್ವಾಮೀಜಿ ಇದ್ದರು.

ಈ ಸಂದರ್ಭದಲ್ಲಿ ಸ್ವಾಮೀಜಿ ಮೊಬೈಲ್ ಅನ್ನು ಪಿಎಸ್ಐ ಸೀತಾರಾಮ ಲಮಾಣಿ ಕಸಿದುಕೊಂಡರು. ಇದರಿಂದ ಸಿಟ್ಟಿಗೆದ್ದ ಸಂಗನಬಸವೇಶ್ವರ ಸ್ವಾಮೀಜಿ ಪಿಎಸ್ಐಗೆ ಕಪಾಳಮೋಕ್ಷ ಮಾಡಿದ್ದಾರೆ.

ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಹಿನ್ನಲೆಯಲ್ಲಿ ಸ್ವಾಮೀಜಿ ಸೇರಿದಂತೆ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ‌.

Advertisement

Leave a reply

Your email address will not be published. Required fields are marked *

error: Content is protected !!