ಬೆಳಗಾವಿ : ಲಂಚಕ್ಕೆ ಬೇಡಿಕೆ ಇಟ್ಟಿದ್ದ EE ಬಂಧನ

ಬೆಳಗಾವಿ : ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಚೆಕ್ ನೀಡಲು 1 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ರಾಯಬಾಗ ತಾಲೂಕಾ ಖೇಮಲಾಪುರ ಗ್ರಾಮದ ಯಾಸಿನ್ ಪೇಂಢಾರಿ ಎಂಬುವವರ 14 ಗುಂಟೆ ಜಮೀನನ್ನು ಮುಗಳಖೋಡ ಹಾಗೂ ಹಾರೂಗೇರಿ ಪಟ್ಟಣಗಳಿಗೆ ಅಮೃತ ಯೋಜನೆಯಡಿ ಕುಡಿಯುವ ನೀರು ಸರಬರಾಜು ಯೋಜನೆಗೆ ಸ್ವಾದಿನ ಪಡಿಕೊಳ್ಳಲಾಗಿತ್ತು.
ಸ್ವಾಧೀನಪಡಿಸಿಕೊಂಡ ಜಮೀನಿಗೆ ಸರಕಾರದಿಂದ ಮುಂಜೂರಾದ 18 ಲಕ್ಷ ರೂ ಅನುದಾನವನ್ನು ನೀಡಲು
ಬೆಳಗಾವಿ ವಿಭಾಗದ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯನಿರ್ವಾಹಕ ಅಭಿಯಂತರ ಅಶೋಕ್ ಶಿರೂರ 1 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಈ ಕುರಿತು ಲೋಕಾಯುಕ್ತ ಅಧಿಕಾರಿ ನಿರಂಜನ ಪಾಟೀಲ್
ಅ.17 ರಂದು ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಲೋಕಾಯುಕ್ತ ಎಸ್ಪಿ ಹನುಮಂತರಾಯ ಮಾರ್ಗದರ್ಶನದಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಅಧಿಕಾರಿಯನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.


