Breaking : ಅಥಣಿ – ಬೆಂಗಳೂರು ಬಸ್ ಅಪಘಾತ, ಹಲವರಿಗೆ ಗಾಯ
ಯರಗಟ್ಟಿ : ಬೆಂಗಳೂರಿನಿಂದ ಅಥಣಿಗೆ ಬರುತ್ತಿದ್ದ ಸರಕಾರಿ ಬಸ್ ಗೆ ಟಿಪ್ಪರ್ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದ ಘಟನೆ ಸಂಭವಿಸಿದೆ.
ಯರಗಟ್ಟಿ ಸಮೀಪದ ಮಬನೂರ ಕ್ರಾಸ್ ಹತ್ತಿರ ತಡರಾತ್ರಿ 3 ಗಂಟೆಗೆ ಘಟನೆ ಸಂಭವಿಸಿದ್ದು ಬಸ್ ನ ಹಿಂಬದಿಗೆ ಟಿಪ್ಪರ್ ವಾಹನ ಡಿಕ್ಕಿ ಹೊಡೆದಿದೆ.

ಘಟನೆಯಲ್ಲಿ ಹತ್ತಕ್ಕೂ ಅಧಿಕ ಜನರಿಗೆ ಗಂಭೀರ ಗಾಯಗೊಂಡಿದ್ದು ಎಲ್ಲರನ್ನೂ ಗೋಕಾಕ್ ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆದಿದೆ. ಯಾವುದೇ ಸಾವು, ನೋವು ಸಂಭವಿಸಿದ್ದು ವರದಿಯಾಗಿಲ್ಲ.
ತಡರಾತ್ರಿ ಮೂರು ಘಂಟೆಗೆ ಅಪಘಾತ ಸಂಭವಿಸಿದ್ದರೂ ಆಂಬ್ಯುಲೆನ್ಸ್ ಸಹ ಬಂದಿಲ್ಲ. ಹಲವು ಬಾರಿ ಕರೆ ಮಾಡಿದರೂ ಆರೋಗ್ಯ ಅಧಿಕಾರಿಗಳು ಸ್ಪಂದಿಸಿಲ್ಲ. ಸ್ಥಳೀಯರು ತಮ್ಮ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಅಧಿಕಾರಿಗಳ ವರ್ತನೆಗೆ ಸಾರ್ವಜನಿಕರರು ಆಕ್ರೋಶ ಹೊರಹಾಕಿದ್ದಾರೆ.


