
ಮೈಸೂರು ದಸರಾದಲ್ಲಿ ಚಿಂಚಲಿ ಮಾಯಕ್ಕಾದೇವಿ ಸ್ತಬ್ಧಚಿತ್ರದ ಕಲರವ

ಮೈಸೂರು ಜಿಲ್ಲೆಯಲ್ಲಿ ಜಂಬೂ ಸವಾರಿಯಲ್ಲಿ 31 ಜಿಲ್ಲೆ, ರಾಜ್ಯ ಸರ್ಕಾರದ 8, ವಿವಿಧ ನಿಗಮ ಮಂಡಳಿಯ 13 ಸೇರಿ ಇತರೆ 6 ಸ್ತಬ್ಧ ಚಿತ್ರಗಳು ಸೇರಿ ಒಟ್ಟು ಬರೋಬ್ಬರಿ 58 ಸ್ತಬ್ಧಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಹೊಸ ಸಂದೇಶ ನೀಡಿದವಲ್ಲದೆ, ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯ ಪ್ರದರ್ಶನ ಹೊಸ ದಾಖಲೆ ಬರೆಯಿತು.
ಅದರಲ್ಲಿ ಬೆಳಗಾವಿ ಜಿಲ್ಲೆಯ ಶ್ರೀ ಮಹಾಕಾಳಿ ಮಾಯಕ್ಕಾದೇವಿ ದೇವಸ್ಥಾನ ಚಿಂಚಲಿಯ ವಿಶೇಷತೆ ಸಾರುವ ಸ್ತಬ್ಧಚಿತ್ರವೂ ಒಂದಾಗಿದ್ದು, ಜನಮನರ ಗಮನ ಸೆಳೆದಿದೆ.
ಮಾಯಕ್ಕ ದೇವಸ್ಥಾನದ ಇತಿಹಾಸ, ದೇವಿಯ ಮಹತ್ವ ಹಾಗೂ ದೇವತೆ ನಿದ್ರಿಸುತ್ತಿರುವ ತೇವಭೂಮಿಯ ಚಿತ್ರಣವನ್ನು ಸ್ಥಬ್ಧಚಿತ್ರದಲ್ಲಿ ತೋರಿಸಲಾಗಿದೆ. ಬಿ.ಎಸ್.ಗಸ್ತಿ ಕಲಾವಿದರ ತಂಡದಿಂದ ಸ್ತಬ್ಧ ಚಿತ್ರವನ್ನು ನಿರ್ಮಿಸಲಾಗಿದೆ.
ಬೆಳಗಾವಿ ಜಿಪಂ ನ ಯೋಜನಾ ನಿರ್ದೇಶಕರಾದ ರವಿ ಎನ್ ಬಂಗಾರೆಪ್ಪನವರ ರವರು ಈ ಸಬ್ತಚಿತ್ರದ ನೋಡಲ್ ಅಧಿಕಾರಿಗಳಾಗಿ ಉಪಸ್ಥಿತರಿದ್ದರು.