
ಹುಕ್ಕೇರಿ ಚುನಾವಣಾ ಅಖಾಡ ಸಿದ್ಧ ; ಯಾರ ಕೈ ಮೇಲು…?ಸಾಹುಕಾರರ ಕೋಟೆ ಕಾಳಗ…!

ಹುಕ್ಕೇರಿ : ವೈಯಕ್ತಿಕ ಆರೋಪ, ಪ್ರತ್ಯಾರೋಪಗಳಿಗೆ ಸಾಕ್ಷಿಯಾಗಿದ್ದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಚುನಾವಣಾ ಕಣ ಅಂತಿಮ ಘಟ್ಟ ತಲುಪಿದ್ದು ಇದೇ ಭಾನುವಾರ ದಿ. 28 ಕ್ಕೆ ಮತದಾನ ನಡೆಯಲಿದ್ದು ನಾಳೆಯೇ ಫಲಿತಾಂಶ ಪ್ರಕಟವಾಗಲಿದೆ.
ಮಾಜಿ ಸಂಸದ ರಮೇಶ್ ಕತ್ತಿ ಹಾಗೂ ಜಾರಕಿಹೊಳಿ ಸಹೋದರರ ಮಧ್ಯೆ ಪೈಪೋಟಿ ಏರ್ಪಟ್ಟಿದ್ದು, ಇತ್ತ ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಕೂಡಾ ಅಖಾಡದಲ್ಲಿದ್ದಾರೆ. ಈಗಾಗಲೇ ಎರಡೂ ಬಣದಿಂದ ಒಂದು ಸುತ್ತಿನ ಚುನಾವಣಾ ಪ್ರಚಾರ ಕಾರ್ಯ ನಡೆದಿದ್ದು ಕಣ ರಂಗೇರುವಂತೆ ಮಾಡಿತ್ತು.
ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಚುನಾವಣೆ 28 ರಂದು ಮುಂ.9 ರಿಂದ 4 ಗಂಟೆವರೆಗೆ ಜರುಗಲಿದ್ದು ಚುನಾವಣೆ ಬೇಕಾಗುವ ಎಲ್ಲ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಎಂದು ಚುನಾವಣೆ ಸುಭಾಶ ಸಂಪಗಾಂವಿ ತಿಳಿಸಿದ್ದಾರೆ.
ವಿದ್ಯುತ್ ಸಹಕಾರಿ ಸಂಘದ 15 ಸ್ಥಾನಗಳಿಗೆ ಚುನಾವಣೆ ಜರುಗಲಿದ್ದು ಅದರಲ್ಲಿ ಸಾಮಾನ್ಯ 9 ಮಹಿಳಾ ಸ್ಥಾನ 2 ಹಿಂದುಳಿದ “ಅ” ವರ್ಗದ 1 ಹಿಂದುಳಿದ “ಬ” ವರ್ಗದ 1 ಪಂ.ಜಾ. ಮಿಸಲು 1 ಪಂ. ಪಂಗಡ ಮೀಸಲು 1 ಸ್ಥಾನಕ್ಕೆ ಚುನಾವಣೆ ಜರುಗಲಿದೆ.
ಸುಸುಜೀತವಾಗಿ ಚುನಾವಣೆ ಜರುಗಿಸುವದಕ್ಕಾಗಿ ಪಟ್ಟಣದ ಎಸ್.ಹೈಸ್ಕೂಲ, ಶಿಕ್ಷಣ ಸಂಸ್ಥೆ 122 ಮಮತಟ್ಟೆಗಳು ಸಂಕೇಶ್ವರ ರಸ್ತೆಗೆ ಹೊಂದಿಕೊಂಡಿರುವ ಬಾಪುಜಿ ಶಿಕ್ಷಣ ಸಂಸ್ಥೆ 2 ಕೇಂದ್ರಗಳಲ್ಲಿ ಚುನಾವಣೆ ಜರುಗಲಿದೆ.
ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ 1 ರಿಂದ 67 ಮತಗಟ್ಟೆ, ಎಸ್.ಹೈಸ್ಕೂಲ, ಶಿಕ್ಷಣ ಸಂಸ್ಥೆ 68 ರಿಂದ 122 ಮತಗಟ್ಟೆ ಸಿದ್ದಪಡಿಸಲಾಗಿದೆ. ಬಾಪೂಜಿ ಶಿಕ್ಷಣ ಸಂಸ್ಥೆಯಲ್ಲಿ ಮತಗಟ್ಟೆಯಲ್ಲಿ 32964 ಹಾಗೂ ಎಸ್.ಹೈಸ್ಕೂಲ, ಶಿಕ್ಷಣ ಸಂಸ್ಥೆ ಮರಗಟ್ಟೆಯಲ್ಲಿ 27082 ಮತದಾರರು ಸೇರಿದಂತೆ ಒಟ್ಟು 60046 ಮತದಾರರು ಮತಚಲಾಯಿಸಲಿದ್ದಾರೆ.
ಎರಡು ಕೇಂದ್ರಗಳ ಮತಗಟ್ಟೆಯಲ್ಲಿ 812 ಚುನಾವಣೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. 6 ವಿಶೇಷ ಮತಕೇಂದ್ರ ನಿರ್ಮಿಸಿ ಅವುಗಳಿಗೆ ಪ್ರತ್ಯೇಕವಾದ ಬಣ್ಣ ವಿಶೇಷ ಬಣ್ಣಗಳಿಂದ ನಿರ್ಮಿಸಲಾಗಿದೆ.
ವಿದ್ಯುತ್ ಸಹಕಾರಿ ಚುನಾವಣೆಯಲ್ಲಿ ಶೇ. 100.ರಷ್ಟು ಮತದಾನವಾಗಬೇಕು ಎಂಬ ಹಿನ್ನೆಯಲ್ಲಿ ಮತದಾರರ ಮನೆಗಳಿಗೆ ಗುರುತಿನ ಚೀಟಿ ಹಾಗೂ ತಮ್ಮ ಮತ ಯಾವ ಕೇಂದ್ರದಲ್ಲಿ ಬರುತ್ತದೆ ಎಂದು ತಿಳವಳಿಕೆ ನೀಡಲಾಗಿದ್ದು ಎರಡು ಮತಗಗಟ್ಟೆ ಗೊಂದಲ ಆಗದಂತೆ ಮತದಾರರಿಗೆ ತಿಳುವಳಿಕೆ ನೀಡಲು ಚುನಾವಣೆ ನಿಯೋಜಿತ ಸಿಬ್ಬಂದಿಯನ್ನು ನೇಮಿಸಲಾಗಿದೆ.
ಸಂಜೆ 5 ರಿಂದ ಸಂಕೇಶ್ವರ ಬಾಪುಜಿ ಶಿಕ್ಷಣ ಸಂಸ್ಥೆಯಲ್ಲಿ 122 ಮತಗಟ್ಟೆಯ ಮತ ಎಣಿಕ್ಕೆ ನಡೆಯಲಿದ್ದು. ಅದಕ್ಕಾಗಿ ಮತಗಟ್ಟೆ ಸುಪ್ರವಾಯಸರ್. 1 ಹಾಗೂ 2 ಸಹಾಯಕ ಸೇರಿದಂತೆ 366 ಸಿಬ್ಬಂದ್ದಿ ಜೊತೆಗೆ 14 ಸಿಬ್ಬಂದಿ ಹೆಚ್ಚುವರಿಯಾಗಿ ಕಾರ್ಯನಿರ್ವಹಿಸಲಿದ್ದು ಇದಕ್ಕಾಗಿ ಬೇಕಾಗುವ ಡಿವಾಯ್ ಎಸ್ಪಿ ಅವರ ನೇತ್ವದಲ್ಲಿ ಪೋಲಿಸ್ ಸಿಬ್ಬಂದಿನ್ನು ನೇಮಿಸಲಾಗಿದೆ ಎಂದು ತಿಳಿಸಿದರು.