Select Page

Advertisement

ಡಿಸಿಸಿ ಚುನಾವಣೆ ಗದ್ದಲ ; ಆಂಬ್ಯುಲೆನ್ಸ್ ನಲ್ಲಿ ಓಡಿಬಂದ ನಿರ್ದೇಶಕ…!

ಡಿಸಿಸಿ ಚುನಾವಣೆ ಗದ್ದಲ ; ಆಂಬ್ಯುಲೆನ್ಸ್ ನಲ್ಲಿ ಓಡಿಬಂದ ನಿರ್ದೇಶಕ…!
Advertisement



ಬೆಳಗಾವಿ : ಡಿಸಿಸಿ ನಿರ್ದೇಶಕರ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಪೈಪೋಟಿ ತೀವ್ರಗತಿಯಲ್ಲಿ ಸಾಗಿದ್ದು, ಮಾನವೀಯತೆ ಮರೆತು ಚುನಾವಣೆ ನಡೆಯುತ್ತಿದೆಯಾ ಎಂಬ ವಾತಾವರಣ ನಿರ್ಮಾಣವಾಗಿದೆ.

ಹೌದು ಕಿತ್ತೂರು ತಾಲೂಕಿನ ಉಗರಖೋಡ ಗ್ರಾಮದ ಪಿಕೆಪಿಎಸ್ ಆಡಳಿತ ಮಂಡಳಿ ಸದಸ್ಯನೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು, ಚುನಾವಣೆ ಪ್ರಕ್ರಿಯೆ ಹಿನ್ನಲೆಯಲ್ಲಿ ಆಂಬ್ಯುಲೆನ್ಸ್ ನಲ್ಲೇ ಆಗಮಿಸಿದ್ದಾರೆ.

*ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಮತಹಕ್ಕು ನೀಡಲು ಬುಧವಾರ ಕರೆದಿದ್ದ ಉಗರಖೋಡ ವಿವಿಧೋದ್ದೇಶ ಗ್ರಾಮೀಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭೆಯನ್ನು ಮುಖ್ಯ ಕಾರ್ಯ ನಿರ್ವಾಹಕ ಗೈರಾಗುಳಿದ ಕಾರಣ ಮುಂದೂಡಲಾಗಿದೆ.

ನಿಗದಿತ ಸಮಯಕ್ಕೆ ಸೊಸೈಟಿಯ 12 ಸದಸ್ಯರು ಆಗಮಿಸಿದ್ದರು. ಇವರಲ್ಲಿ ಐದು ಬಿಜೆಪಿ ಬೆಂಬಲಿತ ಸದಸ್ಯರು, ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಕ ಅರ್ಜುನ್ ಭಂಗಿ ಆರೋಗ್ಯ ಸರಿಯಿಲ್ಲದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಸಭೆ ಮುಂದೂಡಬೇಕು ಎಂದು ಒತ್ತಾಯಿಸಿ ಸಭೆಯಿಂದ ಹೊರನಡೆದರು.

ಸಭೆ ನಡೆಸಲು ಏಳ ಜನ ಸದಸ್ಯರು ಇದ್ದಾರೆ. ಕೋರಂ ಕೊರತೆ ಇಲ್ಲ. ಸಭೆ ನಡೆಸಬೇಕು ಎಂಬ ಒತ್ತಾಯ ಕಾಂಗ್ರೆಸ್ ಬೆಂಬಲಿತ ಸದಸ್ಯರಿಂದ ಕೇಳಿಬಂತು. ಸಭೆ ನಡೆಯಿತು ಆದರೆ ಯಾವುದೇ ಠರಾವು ಸ್ವೀಕರಿಸದೆ ಸಭೆಯನ್ನು ಮೊಟಕು ಗೊಳಿಸಲಾಯಿತು.

ಸೊಸೈಟಿ ಪ್ರತಿನಿಧಿಸುತ್ತಿರುವ ಆಡಳಿತ ಮಂಡಳಿ ಸದಸ್ಯ ನೀಲಕಂಠಯ್ಯ ಮಠದ ಅವರು ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದರು. ಅವರನ್ನು ಆಸ್ಪತ್ರೆಯಿಂದ ಆಂಬ್ಯೂಲೆನ್ಸ್ ವಾಹನದಲ್ಲಿ ಸಭೆ ನಡೆಯುವ ಸ್ಥಳಕ್ಕೆ ಕರೆತರಲಾಗಿತ್ತು.

ಏಳು ಮಂದಿ ಸದಸ್ಯರು ಹಾಗೂ ಬ್ಯಾಂಕ್ ನಿರೀಕ್ಷಕ ಶಿವಾನಂದ ಕೋಟಗಿ ಸೇರಿ ಬಂದೋಬಸ್ತಿಗೆ ಆಗಮಿಸಿದ್ದ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಪ್ರವೀಣ ಗಂಗೋಳ ಅವರಿಗೆ ಗೈರು ಆಗಿರುವ ಮುಖ್ಯ ಕಾರ್ಯನಿರ್ವಾಹಕನನ್ನು ಹುಡುಕಿ ಕೊಡಬೇಕು ಎಂದು ದೂರು ನೀಡಿದರು. ಇಂದು ಮುಖ್ಯ ಕಾರ್ಯನಿರ್ವಾಹಕ ಆಗಮಿಸಿದ್ದಾರೆ.


Advertisement

Leave a reply

Your email address will not be published. Required fields are marked *

error: Content is protected !!