Select Page

Advertisement

ಶಾಸಕರ ಬೆಂಬಲಿಗರಂತೆ ಪೊಲೀಸರ ವರ್ತನೆ ; ಕಿತ್ತೂರು ಠಾಣೆ ಪೊಲೀಸರ ನಡೆಗೆ ಆಕ್ರೋಶ

ಶಾಸಕರ ಬೆಂಬಲಿಗರಂತೆ ಪೊಲೀಸರ ವರ್ತನೆ ; ಕಿತ್ತೂರು ಠಾಣೆ ಪೊಲೀಸರ ನಡೆಗೆ ಆಕ್ರೋಶ

ಚ. ಕಿತ್ತೂರು : ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನಲೆಯಲ್ಲಿ ಪಿಕೆಪಿಎಸ್ ನಲ್ಲಿ ಮತದಾನದ ಹಕ್ಕು (ಡೆಲಿಗೇಶನ್ ಫಾರ್ಮ್) ಪಡೆಯಲು ನಡೆದ ಸಭೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತರ ಮಧ್ಯೆ ವಾಗ್ವಾದ ನಡೆದಿದ್ದು, ಸ್ವತಃ ಪೊಲೀಸರು ಶಾಸಕರ ಬೆಂಬಲಿಗರಂತೆ ವರ್ತನೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಕಿತ್ತೂರು ತಾಲ್ಲೂಕಿನ ಬೈಲೂರು ಗ್ರಾಮದ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಮತದಾನ ಹಕ್ಕು ಪಡೆಯುವ ಸಭೆ ಕರೆಯಕಾಗಿತ್ತು. ಈ ವೇಳೆ ಮೊದಲಿದ್ದ ಕಿತ್ತೂರು ಡಿಸಿಸಿ ಬ್ಯಾಂಕ್ ಶಾಖೆಯ ಬ್ಯಾಂಕ್ ನಿರೀಕ್ಷರನ್ನು ಸೋಮವಾರ ವರ್ಗಾವಣೆ ಮಾಡಲಾಗಿದೆ.

ನಿರೀಕ್ಷಕರನ್ನು ವಾಪಸ್ ಕರೆತಂದ ಶಾಸಕ ಬಾಬಾಸಾಹೇಬ್ ಪಾಟೀಲ್ ಬೆಂಬಲಿಗರು ಬಲವಂತವಾಗಿ ಒಳತಂದರು. ಈ ಸಂದರ್ಭದಲ್ಲಿ ಶಾಸಕರ ಬೆಂಬಲಿಗರಿಗೆ ಪೊಲೀಸರು ಸಹಾಯ ಮಾಡಿದರು.

ಈ ಸಂದರ್ಭದಲ್ಲಿ ಪೊಲೀಸರು ಹಾಗೂ ಇನಾಮದಾರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಸಿಪಿಐ ಹಾಗೂ ಪಿಎಸ್ಐ ವರ್ತನೆ ಒಂದು ಪಕ್ಷದ ಪರವಾಗಿದೆ. ಪೊಲೀಸರ ಈ ವರ್ತನೆ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

Advertisement

Leave a reply

Your email address will not be published. Required fields are marked *

error: Content is protected !!