Select Page

Advertisement

50 ಕೆಜಿ ಗಾಂಜಾ, 9 ಆರೋಪಿ ಗಳು ; ಅತಿದೊಡ್ಡ ಕಾರ್ಯಾಚರಣೆ ಯಶಸ್ವಿಗೊಳಿಸಿದ ಇನ್ಸ್ಪೆಕ್ಟರ್ ಗಡ್ಡೇಕರ್ ತಂಡ

50 ಕೆಜಿ ಗಾಂಜಾ, 9 ಆರೋಪಿ ಗಳು ; ಅತಿದೊಡ್ಡ ಕಾರ್ಯಾಚರಣೆ ಯಶಸ್ವಿಗೊಳಿಸಿದ ಇನ್ಸ್ಪೆಕ್ಟರ್ ಗಡ್ಡೇಕರ್ ತಂಡ

ಬೆಳಗಾವಿ : ನಗರದಲ್ಲಿ ಗಾಂಜಾ‌ ಸೇರಿದಂತೆ ಮಾದಕವಸ್ತುಗಳ ಮಾರಾಟ ಹಾಗೂ ಸೇವನೆ ಜಾಲವನ್ನು ಮಟ್ಟ ಹಾಕುವ ಉದ್ದೇಶದಿಂದ ಬೆಳಗಾವಿ ನಗರದ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಇದರ ಮುಂದುವರಿದ ಭಾಗವಾಗಿ ನಗರ ಸಿಇಎನ್ ಅಪರಾಧ ಠಾಣೆ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ನೇತೃತ್ವದ ತಂಡ ನಡೆಸಿರುವ ಮಹತ್ವದ ಕಾರ್ಯಾಚರಣೆಯಲ್ಲಿ 9 ಜನ ಆರೋಪಿಗಳ‌ ಜೊತೆ ಲಕ್ಷಾಂತರ ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಕಳೆದ ಜೂನ್. 29 ರಂದು ತಾಜಿಬ್ ಮುಲ್ಲಾ ಹಾಗೂ ಅನುರಾಗ ಯರನಾಳಕರ್ ಇಬ್ಬರನ್ನು ನಗರದ ಸಿಇಎನ್ ಠಾಣೆ ಪೊಲೀಸರು ಬಂಧಿಸಿ ಆರೋಪಿಗಳಿಂದ 5 ಕೆಜಿ‌ ಗಾಂಜಾ ಜಪ್ತಿ ಮಾಡಿಕೊಳ್ಳಲಾಗಿತ್ತು.‌ ಇದೇ ಪ್ರಕರಣದ ಬೆನ್ನುಬಿದ್ದ ಪೊಲೀಸರ ತಂಡ ಮುಂಬೈ ನಲ್ಲಿ ಸದ್ದಾಂ ಎಂಬಾತನ ಮನೆ ಮೇಲೆ ದಾಳಿ ನಡಿಸಿ ಆತನ ಮಾವ ಅಬ್ದುಲ್ ಮಾಜೀದ್ ಜೊತೆ 2 ಕೆಜಿ ಗಾಂಜಾ ಜೊತೆ ಬಂಧಿಸಿ ಬೆಳಗಾವಿಗೆ ಕರೆತಂದಿದ್ದರು. ಆರೋಪಿಗಳನ್ನು ಹಿಂಡಲಗಾ ಜೈಲಿನಲ್ಲಿ ಇಡಲಾಗಿತ್ತು.

ಹಿಂಡಲಗಾ ಜೈಲಿನಲ್ಲಿದ್ದವರನ್ನು ನೋಡಲು ಬೆಳಗಾವಿಗೆ ಆರೋಪಿಗಳ ತಂಡ ಬರುತ್ತಿತ್ತು. ಚಂದಗಡ ರಸ್ತೆಯಲ್ಲಿ ಆರೋಪಿಗಳು ಬರುತ್ತಿದ್ದ ಕಾರು ಪರಿಶೀಲನೆ ಮಾಡಿರುವ ವೇಳೆ 50 ಕೆಜಿ ಗಾಂಜಾದೊಂದಿದೆ ಸಿಕ್ಕಿ ಬಿದ್ದಿದ್ದಾರೆ. ಅದಲ್ಲದೇ ಇವರ ಬಳಿಯಿದ್ದ 10 ಮೊಬೈಲ್ ಗಳು, ಒಂದು ಮಚ್ಚು, ಒಂದು ತೂಕದ ಮಷಿನ್, 4000 ರೂ ನಗದು ವಶಕ್ಕೆ ಪಡೆದು ಕೃತ್ಯಕ್ಕೆ ಬಳಿಸಿದ ಮೂರು ಕಾರನ್ನು ಪೊಲೀಸರು ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕಾರ್ಯಾಚರಣೆಯಲ್ಲಿ‌ ಸದ್ದಾಂ ಸೇರಿದಂತೆ ತಾಜೀರ್ ಬಸ್ತವಾಡೆ, ಪ್ರಥಮೇಶ ಲಾಡ್, ತೇಜಸ್ ವಾಜರೆ, ಶಿವಕುಮಾರ ಆಸಬೆ ಹಾಗೂ ರಮಜಾನ್ ಜಮಾದಾರ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಒಟ್ಟು 9 ಆರೋಪಿಗಳನ್ನು ಬಂಧಿಸಲಾಗಿದ್ದು, ಒಟ್ಟು 50 ಕೆಜಿ 452 ಗ್ರಾಂ ಗಾಂಜಾ ಸೇರಿ ಒಟ್ಟು 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಧ್ಯಮಗಳಿಗೆ ಮಾಹಿತಿ‌ ನೀಡಿದರು.

*************

ಇನ್ಸ್ಪೆಕ್ಟರ್ ಗಡ್ಡೇಕರ್ ತಂಡದ ಕಾರ್ಯ ಶ್ಲಾಘನೀಯ : ಮೊದಲು ದಾಖಲಾಗಿದ್ದ ಸಣ್ಣ ಪ್ರಕರಣದ ಬೆನ್ನು ಬಿದ್ದ ಕಾರಣಕ್ಕೆ ಇಷ್ಟು ದೊಡ್ಡ ಪ್ರಕರಣ ಬಯಲಾಗಲು ಸಾಧ್ಯವಾಗಿದೆ. ನಗರದ ಸಿಇಎನ್ ಠಾಣೆ ಇನ್ಸ್ಪೆಕ್ಟರ್ ಬಿ.ಆರ್ ಗಡ್ಡೇಕರ್ ನೇತೃತ್ವದ ತಂಡ ಸುಮಾರು ದಿನಗಳಿಂದ ಮುಂಬೈ ಸೇರಿದಂತೆ ವಿವಿಧ ನಗರದಕ್ಕೆ ತೆರಳಿ ಮಾಹಿತಿ ಕಲೆಹಾಕುವಲ್ಲಿ ಯಶಸ್ವಿಯಾಗಿದೆ. ನಂತರ ಬೃಹತ್ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟದ ಜಾಲವನ್ನೇ ಭೇದಿಸಿದ್ದು ಇವರ ಕಾರ್ಯಕ್ಕೆ ಕಮಿಷನರ್ ಬಹುಮಾನ ಘೋಷಣೆ ಮಾಡಿದ್ದಾರೆ.

********************


Advertisement

Leave a reply

Your email address will not be published. Required fields are marked *

error: Content is protected !!