Select Page

Advertisement

ಬೆಳಗಾವಿ ವಿಭಜಿಸಿ ಹೊಸ ಜಿಲ್ಲೆ ಘೋಷಿಸಿ ; ಸರಕಾರಕ್ಕೆ ಸಂಸದ ಕಡಾಡಿ ಆಗ್ರಹ

ಬೆಳಗಾವಿ ವಿಭಜಿಸಿ ಹೊಸ ಜಿಲ್ಲೆ ಘೋಷಿಸಿ ; ಸರಕಾರಕ್ಕೆ ಸಂಸದ ಕಡಾಡಿ ಆಗ್ರಹ

ಬೆಳಗಾವಿ : ಜಿಲ್ಲೆಯ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಬಿಟ್ಟು ಡಿಸೆಂಬರ್ 2025 ರ ಒಳಗಾಗಿ ಜಿಲ್ಲಾ ವಿಭಜನೆಯನ್ನು ರಾಜ್ಯ ‌ಸರಕಾರ ಮಾಡಬೇಕು ಎಂದು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಹೇಳಿದರು.

ಬುಧವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ನೂತನ ಜಿಲ್ಲೆಯ ರಚನೆಗೆ 2025ರ ಡಿಸೆಂಬರ್ 31ರೊಳಗಾಗಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡಬೇಕು.

ಡಿಸೆಂಬರ್ ಅಂತ್ಯದ ಒಳಗೆ ಹೊಸ ಜಿಲ್ಲೆ ಘೋಷಣೆ ಮಾಡಬೇಕು. ಕೇಂದ್ರ ಸರಕಾರ 2026ರಿಂದ ಜಾತಿ ಗಣತಿ ಮಾಡಲು ನಿರ್ಧರಿಸಿದೆ. ದೇಶದ ಎಲ್ಲ ರಾಜ್ಯಗಳಲ್ಲಿ ಹೊಸ ಜಿಲ್ಲೆ ಘೋಷಣೆ ಮಾಡಲು ಕೇಂದ್ರ ಸಚಿವಾಲಯ ಸೂಚನೆ ನೀಡಿದೆ ಎಂದರು.

ಬೆಳಗಾವಿ ಜಿಲ್ಲೆ ಆಡಳಿತಾತ್ಮಕ ದೃಷ್ಟಿಯಿಂದ ನಲುಗಿ ಹೋಗಿದೆ. ಅಧಿಕಾರಿಗಳಿಗೆ ದೊಡ್ಡ ಜಿಲ್ಲೆಯಾಗಿರುವುದರಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದರು. ವಾದುದೇವ ಸಮಿತಿ, ಹುಂಡೇಕರ್ ಆಯೋಗ, ಪಿ.ಸಿ.ಗದ್ದಿಗೌಡರ, ಎಂ.ಪಿ.ಪ್ರಕಾಶ ಆಯೋಗಗಳನ್ನು ಸರಕಾರ ರಚನೆ ಮಾಡಿದ್ದವು. ಈ ಆಯೋಗ ನೀಡಿರುವ ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದಾರೆ ಎಂದರು. ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ, ಬಸವರಾಜ ಇದ್ದರು.

Advertisement

Leave a reply

Your email address will not be published. Required fields are marked *

error: Content is protected !!