ಅಜ್ಜಿಯ ಭೇಟಿಗೆ ಬಂದ ಇಬ್ಬರು ಮೊಮ್ಮಕ್ಕಳು ವಿಮಾನ ಅಪಘಾತದಲ್ಲಿ ದುರಂತ ಸಾವು
ಅಹಮದಾಬಾದ್ : ಲಂಡನ್ ನಲ್ಲಿದ್ದ ಇಬ್ಬರು ಯುವತಿಯರು ತನ್ನ ಅಜ್ಜಿಯನ್ನು ಭೇಟಿಯಾಗಲು ಅಹಮದಾಬಾದ್ ಗೆ ಬಂದು ವಾಪಸ್ ತೆರಳುವ ವೇಳೆ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗುಜರಾತ್ನ ಅಹಮದಾಬಾದ್ನಲ್ಲಿ ನಡೆದ ಘನಘೋರ ವಿಮಾನ ದುರಂತದಲ್ಲಿ ಒಟ್ಟು 265 ಮಂದಿ ನಿಧನರಾಗಿದ್ದಾರೆ. ತಾಂತ್ರಿಕ ದೋಷದಿಂದ ವಿಮಾನದ ಸಿಗ್ನಲ್ ಕಡಿತಗೊಂಡು ಕಟ್ಟಡದ ಮೇಲೆ ಬಿದ್ದು ವಿಮಾನ ಪತನಗೊಂಡಿದೆ ಎಂದು ಹೇಳಲಾಗ್ತಿದೆ.
ಈ ಭೀಕರ ವಿಮಾನ ದುರಂತದಲ್ಲಿ 229 ಪ್ರಯಾಣಿಕರು, 12 ಮಂದಿ ವಿಮಾನದ ಸಿಬ್ಬಂದಿ ಮೃತಪಟ್ಟಿದ್ದಾರೆ. ಈ ವಿಮಾನ ದರಂತದಲ್ಲಿ ಗುಜರಾತ್ ಸಹೋದರಿಯರು ಜೀವಬಿಟ್ಟಿದ್ದಾರೆ. ಧೀರ್ ಮತ್ತು ಹೀರ್ ಬಾಕ್ಸಿ ಎಂಬ ಇಬ್ಬರು ಸಹೋದರಿಯರು ಅಜ್ಜಿಯ ಹುಟ್ಟುಹಬ್ಬಕ್ಕೆಂದು ಭಾರತಕ್ಕೆ ಬಂದಿದ್ದರು.
ಅಜ್ಜಿಯ ಬರ್ತ್ ಡೇ ಸೆಲೆಬ್ರೇಷನ್ನಲ್ಲಿ ಗುಜರಾತ್ ಮೂಲದ ಧೀರ್ ಮತ್ತು ಹೀರ್ ಬಾಕ್ಸಿ ಇಬ್ಬರು ಭಾಗಿಯಾಗಿ ಖುಷಿ ಖುಷಿಯಲ್ಲಿ ಕುಟುಂಬಸ್ಥರ ಜೊತೆಗೆ ಕಾಲ ಕಳೆದಿದ್ದರು. ಈ ಇಬ್ಬರು 17J ಮತ್ತು H ಸೀಟುಗಳಲ್ಲಿ ಕುಳಿತುಕೊಂಡಿದ್ದರು.
ಆಗ ವಿಮಾನ ಟೇಕ್ ಆಫ್ ಆಗಿ ಕೊಂಚ ದೂರ ಹೋಗು ತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಮೇಘಾನಿ ನಗರದ ಬಳಿ ಅಪಘಾತಕ್ಕೀಡಾಗಿದೆ.


