ಚಿಕ್ಕೋಡಿ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಅಸ್ತಿತ್ವಕ್ಕೆ
ಬೆಳಗಾವಿ : ಚಿಕ್ಕೋಡಿ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ನೂತನ ಪದಾಧಿಕಾರಿಗಳು ನೇಮಕ ಮಾಡಲಾಯಿತು.
ಸೋಮವಾರ ಬೆಳಗಾವಿ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಸಭೆಯಲ್ಲಿ ಸಂಸ್ಥೆಯ ಗೌರವ ಅಧ್ಯಕ್ಷರಾಗಿ ಶ್ರೀಕಾಂತ್ ಕುಬಕಡ್ಡಿ, ಅಧ್ಯಕ್ಷರಾಗಿ ಸಿದ್ದೇಶ ಪುಟಾಣೆ, ಉಪಾಧ್ಯಕ್ಷರಾಗಿ ಅಜಿತ್ ಸಣ್ಣಕ್ಕಿ, ಪ್ರಧಾನ ಕಾರ್ಯದರ್ಶಿಯಾಗಿ ಸಂಜೀವ ಅರಭಾವಿ, ಸಹ ಕಾರ್ಯದರ್ಶಿಯಾಗಿ ಸಂಜಯ ಕೌಲಗಿ, ಖಜಾಂಚಿಯಾಗಿ ದುರದುಂಡಯ್ಯ ಹಿರೇಮಠ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾ ಎಲೆಕ್ಟ್ರಾನಿಕ್ ಮಿಡಿಯಾ ಜರ್ನಲಿಸ್ಟ್ ಅಸೊಸಿಯೇಷನ್ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.


