ಮಳೆ ಅವಾಂತರ ; ಮನೆ ಗೋಡೆ ಕುಸಿದು 3 ವರ್ಷದ ಮಗು ಸಾವು
ಬೆಳಗಾವಿ : ಬೆಳಗಾವಿ ಜಿಲ್ಲೆಯಾದ್ಯಂತ ನಿರಂತರ ಮಳೆಗೆ ಮನೆಯ ಗೋಡೆ ಕುಸಿದು ಮೂರು ವರ್ಷದ ಮಗು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಮಹಲಿಂಗೇಶ್ವರ ಕಾಲೋನಿಯಲ್ಲಿ ನಡೆದಿದೆ.
ಕೀರ್ತಿಲಾ ನಾಗೇಶ್ ಪೂಜಾರಿ(3) ಮೃತ ದುರ್ದೈವಿ ಮನೆಯ ಹಿಂಬದಿಯ ಗೋಡೆ ಕುಸಿದು ಮಗವಿನ ಮೇಲೆ ಬಿದ್ದ ಪರಿಣಾಮ ಸ್ಥಳದಲ್ಲೇ ಸಾವು. ಮತ್ತೋರ್ವ ನಾಲ್ಕು ವರ್ಷದ ಬಾಲಕಿಗೆ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ರೂಮ್ ನಲ್ಲಿ ಮಲಗಿದ್ದ ಅಕ್ಕತಂಗಿ. ಮತ್ತೊಂದು ರೂಮ್ ನಲ್ಲಿ ಮಲಗಿದ್ದ ತಂದೆ ತಾಯಿ ಬೆಳಗಿನ ಜಾವ ಕುಸಿದು ಬಿದ್ದ ಮನೆಯ ಒಂದು ಭಾಗದ ಗೋಡೆ ಕುಸಿದಿದೆ. ಸ್ಥಳಕ್ಕೆ ಗೋಕಾಕ್ ಶಹರ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.
ಬಾಲಕಿ ಶವ ಗೋಕಾಕ್ ಸರ್ಕಾರಿ ಆಸ್ಪತ್ರೆ ಶವಾಗಾರಕ್ಕೆ ಶಿಪ್ಟ್ ಮಾಡಲಾಗಿದೆ.ಗೋಕಾಕ್ ಶಹರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


