Select Page

ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸ್ ಅಧಿಕಾರಿ ಪುತ್ರನ ಬಂಧನ…! ಬೆನ್ನು ಬಿಡದ ಬೆಳಗಾವಿ ವಾಯ್ಸ್

ಸಾಮೂಹಿಕ ಅತ್ಯಾಚಾರ ಪ್ರಕರಣ : ಪೊಲೀಸ್ ಅಧಿಕಾರಿ ಪುತ್ರನ ಬಂಧನ…! ಬೆನ್ನು ಬಿಡದ ಬೆಳಗಾವಿ ವಾಯ್ಸ್

ಬೆಳಗಾವಿ : ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿತ ಪೊಲೀಸ್ ಅಧಿಕಾರಿ ಪುತ್ರನನ್ನು ಕೊನೆಗೂ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜಿಲ್ಲೆ ಒಂದರಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಅಧಿಕಾರ ಪುತ್ರ ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಮೂವರು ಅಪ್ರಾಪ್ತ ಬಾಲಕರು ಹಾಗೂ ರೆಸಾರ್ಟ್ ಮಾಲಿಕರಾದ ಇಬ್ಬರನ್ನು ಬಂಧಿಸಲಾಗಿದೆ‌.

ಬೆಳಗಾವಿ ಹೊರ ವಲಯದ ರೆಸಾರ್ಟ್ ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ನಡೆಸಿದ್ದ ಸಾಕೀಬ್ ಎಂಬಾತ ಸೇರಿ ಇಬ್ಬರು ಅಪ್ರಾಪ್ತರಿಂದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ ಕೇಸ್ ಸಾಕೀಬ್ ಸೇರಿ ಓರ್ವ ಅಪ್ರಾಪ್ತನನ್ನ ಅರೆಸ್ಟ್ ಮಾಡಿದ್ದ ಪೊಲೀಸರು. ಈಗ ಸಿಪಿಐ ಪುತ್ರ ಸೇರಿ ರೆಸಾರ್ಟ್ ನಡೆಸುತ್ತಿದ್ದವರು ಬಂಧಿಸಿದ್ದಾರೆ.

ಅಪ್ರಾಪ್ತರಿಗೆ ರೆಸಾರ್ಟ್ ಕೊಟ್ಟಿದ್ದ ರೋಹನ್ ಪಾಟೀಲ್, ಅಶತೋಷ ಪಾಟೀಲ್ ಹಿಂಡಲಗಾ ಜೈಲಿಗೆ ರವಾನೆ ಮಾಡಿದ್ದಾರೆ. ಮನೆಯೊಂದನ್ನು ಬಾಡಿಗೆ ಪಡೆದು ತಿಂಗಳಿಗೆ 20 ಸಾವಿರಕ್ಕೆ ರೆಸಾರ್ಟ್ ಆಗಿ ಪರಿವರ್ತನೆ ಮಾಡಿದ್ದರು.

ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ಪೊಲೀಸರಿಂದ ಬಂಧಿಸಿದ್ದಾರೆ. ಸಿಪಿಐ ಪುತ್ರನನ್ನು ರಿಮ್ಯಾಂಡ್ ಹೊಮ್ ‌ನಲ್ಲಿ ಇಡಲಾಗಿದೆ‌.


Advertisement

Leave a reply

Your email address will not be published. Required fields are marked *

error: Content is protected !!