ಪಾಕಿಸ್ತಾನ ದಾಳಿಗೆ ಭಾರತೀಯ ಯೋಧ ಹುತಾತ್ಮ
ಗಡಿಯಲ್ಲಿ ಪಾಕಿಸ್ತಾನ ಪ್ರಚೋದಿತ ದಾಳಿ ನಡೆಸಿದ್ದು ಭಾರತದ ಓರ್ವ ಸೈನಿಕ ಮೃತಪಟ್ಟಿದ್ದಾರೆ. ಲ್ಯಾನ್ಸ್ ನಾಯಕ್ ದಿನೇಶ್ ಕುಮಾರ ಅವರಿಗೆ ಗುಂಡೇಟು ತಗುಲಿದ್ದು ಸಾವಣಪ್ಪಿದ್ದಾರೆ.
ಅಂತರಾಷ್ಟ್ರೀಯ ಗಡಿ ರೇಖೆಗೆ ಹೊಂದಿಕೊಂಡ ಪೂಂಚ್ ಸೆಕ್ಟರ್ ನಲ್ಲಿ ಪಾಕಿಸ್ತಾನ ಸೇನೆ ಸೆಲ್ ದಾಳಿ ನಡೆಸಿದ್ದು ಹರಿಯಾಣ ಪಲ್ವಾಲ್ ಮೂಲದ ಭಾರತೀಯ ಯೋಧ ಲ್ಯಾನ್ಸ್ ನನಾಯಕ್ ದಿನೇಶ್ ಕುಮಾರ್ ಮೃತಪಟ್ಟಿದ್ದಾರೆ.
ಈಗಾಗಲೇ ಭಾರತೀಯ ಸೇನೆ ಉಗ್ರರನ್ನು ಗುರಿಯಾಗಿಸಿಕೊಂಡು ದಾಳಿ ಮುಂದುವರಿಸಿದ್ದು, ಅತ್ತ ಕಡೆಯಿಂದ ಪಾಕಿಸ್ತಾನ ಸೇನೆ ಪ್ರತಿದಾಳಿ ಮುಂದುವರಿಸಿದೆ. ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.
ಶಾಕಾ ಕಾಲೇಜುಗಳಿಗೆ ರಜೆ ಘೋಷಣೆ : ರಾಜಸ್ಥಾನ : ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ಧದ ಭೀತಿ ಎದುರಾಗಿದ್ದು ಏಲ್ಲೆಡೆ ಸೇನೆ ಹೈ ಅಲರ್ಟ್ ಘೋಷಣೆ ಮಾಡಿದೆ. ಈ ಮಧ್ಯೆ ರಾಜಸ್ಥಾನದ ಜೋಧಪುರ ಜಿಲ್ಲಾಡಳಿತ ಮುಂದಿನ ಆದೇಶದವರೆಗೆ ಶಾಲಾ ಕಾಲೆಜುಗಳಿಗೆ ರಜೆ ಘೋಷಣೆ ಮಾಡಿದೆ.
ರಾಜಸ್ಥಾನ ರಾಜ್ಯದ ಜೋಧಪುರ ಆಡಳಿತವು ಇಂದಿನಿಂದ ಮುಂದಿನ ಆದೇಶದವರೆಗೆ ಎಲ್ಲಾ ಖಾಸಗಿ ಮತ್ತು ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ರಜೆ ಘೋಷಿಸಿದೆ. ರಕ್ಷಣೆ, ಭದ್ರತೆ ದೃಷ್ಟಿಯಿಂದ ಜಿಲ್ಲಾಧಿಕಾರಿ ಗೌರವ್ ಅಗರ್ವಾಲ್ ಅವರು ಈ ಆದೇಶ ಹೊರಡಿಸಿದ್ದಾರೆ.


