ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿ ನೆರವಿಗೆ ಸಂಸದ ಜಗದೀಶ್ ಶೆಟ್ಟರ್
ಬೈಲಹೊಂಗಲ: ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತ ವೇಳೆ ತೀವ್ರ ಗಾಯಗೊಂಡು ರಸ್ತೆ ಮಧ್ಯೆ ನರಳಾಡುತ್ತಿದ್ದ ಬೈಕ್ ಸವಾರನನ್ನು ಸಂಸದ ಜಗದೀಶ ಶೆಟ್ಟರ ತಮ್ಮ ಎಸ್ಕಾರ್ಟ್ ವಾಹನ ಮೂಲಕ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದರು.
ತಾಲ್ಲೂಕಿನ ಆನಿಗೋಳ, ನಯಾನಗರ ಗ್ರಾಮಗಳ ಮದ್ಯ ದ್ವಿಚಕ್ರ ವಾಹನ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ನಡು ರಸ್ತೆಯಲ್ಲಿ ಗಾಯಗೊಂಡು ತೀವ್ರ ರಕ್ತಸ್ತ್ರಾವದಿಂದ ನರಳಾಡುತ್ತಿದ್ದ ಬೈಕ್ ಸವಾರನ ಚಿಕಿತ್ಸೆಗೆ ದಾರಿ ಹೋಕರು ಅಂಬ್ಯುಲೆನ್ಸ್ ಗೆ ಕರೆ ಮಾಡಿದರೂ ಒಂದು ಗಂಟೆ ಬರಲಿಲ್ಲ.
ಇದೇ ಮಾರ್ಗದಲ್ಲಿ ಬಿಜೆಪಿ ಕಾರ್ಯಕರ್ತ ಮದುವೆ ಸಮಾರಂಭಕ್ಕೆ ತೆರಳುತ್ತಿದ್ದ ಸಂಸದ ಜಗದೀಶ ಶೆಟ್ಟರ ಅಪಘಾತ ಸ್ಥಳದಲ್ಲಿ ಗಾಯಗೊಂಡ ಬಸವರಾಜ ರಾಗಿ (48), ಶಾಂತ ವೀರಗೌಡ ಪಾಟೀಲ ಅವರನ್ನು ತಮ್ಮದೆ ವಾಹನದಲ್ಲಿ ಬೈಲಹೊಂಗಲ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ಸಾಗಿಸಿದರು. ಘಟನಾ ಸ್ಥಳದಲ್ಲಿ ಜನಜಂಗುಳಿ ಹೆಚ್ಚಿತ್ತು.


