ಅಥಣಿಯಲ್ಲಿ ಡಬಲ್ ಮರ್ಡರ್ ; ತಾಯಿ, ಮಗನ ಹತ್ಯೆ
ಅಥಣಿ : ತಾಯಿ ಹಾಗೂ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿ ದುಷ್ಕರ್ಮಿಗಳು ಪರಾರಿಯಾದ ಘಟನೆ ಅಥಣಿ ತಾಲೂಕಿನ ಕೊಡಗಾನೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚಂದ್ರವ್ವ ಅಪ್ಪಾರಾಯ ಇಚೇರಿ (62), ವಿಠ್ಠಲ್ ಅಪ್ಪರಾಯ ಇಚೇರಿ (42) ಮೃತ ದುರ್ದೈವಿಗಳು. ಇಬ್ಬರನ್ನೂ ಹೊಡೆದು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಎಸೆದು ಕೊಲೆಗಡುಕರು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಐಗಳಿ ಪೊಲೀಸ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ. ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ.


