Select Page

ನಮ್ದು ತಪ್ಪಿದೆ ; ಗೃಹ ಸಚಿವರಿಗೆ ದೂರು ನೀಡುವೆ : ಸಚಿವ ರಾಜಣ್ಣ

ನಮ್ದು ತಪ್ಪಿದೆ ; ಗೃಹ ಸಚಿವರಿಗೆ ದೂರು ನೀಡುವೆ : ಸಚಿವ ರಾಜಣ್ಣ

ಬೆಂಗಳೂರು : ಹನಿಟ್ರ್ಯಾಪ್ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಸಹಕಾರ ಸಚಿವ ಕೆ.ಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ಗೃಹ ಸಚಿವರಿಗೆ ಭೇಟಿಯಾಗಿ ದೂರು ನೀಡುವೆ ಎಂದು ಹೇಳಿದ್ದಾರೆ.

ತಮ್ಮ ಬಳಿ ಸಾಕ್ಷಿ ಏನಾದರು ಇದೆಯಾ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಇವರು. ನಮ್ಮದು ತಪ್ಪಿದೆ. ಮನೆಯಲ್ಲಿ ಸಿಸಿಟಿವಿ ಇಲ್ಲ. ಹಾಗಾಗಿ ನಾವು ಅವರ ಕುರಿತು ಮಾಹಿತಿ ಹೊಂದಿಲ್ಲ. ಆದರೆ ಘಟನೆ ಕುರಿತು ದೂರಿನಲ್ಲಿ ಉಲ್ಲೇಖ ಮಾಡುವುದಾಗಿ ತಿಳಿಸಿದ್ದಾರೆ.

ಸಚಿವ ರಾಜಣ್ಣ ಹಾಗೂ ಅವರ ಪುತ್ರನ ಮೇಲೆ‌ ಹನಿಟ್ರ್ಯಾಪ್ ಗೆ ಯತ್ನ ನಡೆದಿದೆ ಎಂದ ಆರೋಪ‌ ಕೇಳಿಬಂದಿತ್ತು. ಈ ಕುರಿತು ಬಜೆಟ್ ಅಧಿವೇಶನ ವೇಳೆ ರಾಜಣ್ಣ ತಮ್ಮ ವಿರುದ್ಧ ಹನಿಟ್ರ್ಯಾಪ್ ಯತ್ನ ನಡೆದಿದೆ ಎಂದು ಒಪ್ಪಿಕೊಂಡಿದ್ದರು.

ಸಂಜೆ ಸಚಿವ ರಾಜಣ್ಣ ಗೃಹ ಸಚಿವರಿಗೆ ದೂರು ನೀಡಲಿದ್ದು, ಅದರಲ್ಲಿ ಏನೆಲ್ಲ ಉಲ್ಲೇಖ ಮಾಡುತ್ತಾರೆ ಎಂಬುದರ ಮೇಲೆ ಈ ಪ್ರಕರಣದ ತನಿಖೆ ಮುಂದೆ ಸಾಗಲಿದೆ.

Advertisement

Leave a reply

Your email address will not be published. Required fields are marked *

error: Content is protected !!