Select Page

Advertisement

ಪಾರಿವಾಳ ಹಣಕ್ಕೆ ಗಲಾಟೆ ; ಜೈಲು ಸೇರಿದ ಕಿಡಿಗೇಡಿಗಳು

ಪಾರಿವಾಳ ಹಣಕ್ಕೆ ಗಲಾಟೆ ; ಜೈಲು ಸೇರಿದ ಕಿಡಿಗೇಡಿಗಳು

ಬೆಳಗಾವಿ : ಪಾರಿವಾಳ ವಿಚಾರವಾಗಿ ಗಲಾಟೆ ವಿಕೋಪಕ್ಕೆ ತಿರುಗಿ ಅಪ್ರಾಪ್ತನ ಮನೆ ಧ್ವಂಸಕ್ಕೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಬಸ್ತವಾಡ ಗ್ರಾಮದಲ್ಲಿ ನಡೆದಿದೆ.

ದರ್ಶನ್ ಎಂಬಾತನಿಂದ ಗ್ರಾಮದ ಅಪ್ರಾಪ್ತ ಬಾಲಕ ಪಾರಿವಾಳ ಖರೀದಿ ಮಾಡಿದ್ದ. ನಂತರ ಪಾರಿವಾಳದ ಹಣ ನೀಡುವಂತೆ ದರ್ಶನ್ ಆಗ್ರಹಿಸಿದ್ದ. ಇದೇ ಕಾರಣಕ್ಕೆ ಅಪ್ರಾಪ್ತ ಸ್ನೇಹಿತರ ಜೊತೆಗೂಡಿ ದರ್ಶನ್ ಮೇಲೆ ಹಲ್ಲೆಗೆ ಯತ್ನಿಸಿದ್ದ.‌

ಇದೇ ಸಿಟ್ಟಿನಲ್ಲಿ ದರ್ಶನ್ ತನ್ನ ಸ್ನೇಹಿತರ ಜೊತೆಗೂಡಿ ಅಪ್ರಾಪ್ತನ ಮನೆಗೆ ನುಗ್ಗಿ ಧ್ವಂಸ ಕ್ಕೆ ಯತ್ನಿಸಿದ್ದಾನೆ.‌ ಮನೆಯಲ್ಲಿದ್ದ ವಸ್ತುಗಳನ್ನು ದ್ವಂಸಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ.‌

ಅಪ್ರಾಪ್ತನಿಂದ ಹಲ್ಲೆ ಕುರಿತು ಹಿರೇಬಾಗೇವಾಡಿ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ದರ್ಶನ್ ಮೇಲೆ ಹಲ್ಲೆ ಮಾಡಿದ್ದ ಅಪ್ರಾಪ್ತ ಸೇರಿ‌ ಮೂವರನ್ನು ಬಂಧಿಸಲಾಗಿದೆ. ಇನ್ನೂ ಅಪ್ರಾಪ್ತನ ಮನೆ ಧ್ವಂಸ ಕುರಿತು ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಅನ್ವಯ ದರ್ಶನ್ ಸೇರಿ ಏಳು ಜನರನ್ನು ಬಂಧಿಸಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!