ಬಿಜೆಪಿ ಯುವ ಮುಖಂಡೆ ಆತ್ಮಹತ್ಯೆಗೆ ಶರಣು ; ಸಾವಿಗೆ ಏನು ಕಾರಣ…?
ಸೂರತ್ : ಗುಜರಾತ್‌ನ ಸೂರತ್‌ನಲ್ಲಿ 34 ವರ್ಷದ ಬಿಜೆಪಿ ಮುಖಂಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೂರತ್‌ನ ಬಿಜೆಪಿಯ ಮಹಿಳಾ ಮೋರ್ಚಾದ ನಾಯಕಿ ದೀಪಿಕಾ ಪಟೇಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೀಪಿಕಾ ತಮ್ಮ ಪತಿ ಮತ್ತು ಮೂವರು ಮಕ್ಕಳನ್ನು ಅಗಲಿದ್ದಾರೆ.
ದೀಪಿಕಾ ಪಟೇಲ್ ನಿನ್ನೆ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಪೋರೇಟರ್ ಚಿರಾಗ್ ಸೋಲಂಕಿ ಮತ್ತು ಅವರ ಕುಟುಂಬ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರಾದ್ರೂ, ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದರು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
ಸಾವಿಗೂ ಮುನ್ನ ದೀಪಿಕಾ ಚಿರಾಗ್ ಸೋಲಂಕಿಗೆ ಕರೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ದೀಪಿಕಾ ಅವರು ಬಳಿ ತಾವು ತುಂಬಾ ಒತ್ತಡದಲ್ಲಿದ್ದು ಬದುಕಲು ಸಾಧ್ಯವಿಲ್ಲ ಎಂದು ಹೇಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತಕ್ಷಣೆವೇ ಚಿರಾಗ್ ಸ್ಥಳಕ್ಕೆ ಧಾವಿಸಿ ಬಂದಿದ್ದರೂ ಅಷ್ಟರಲ್ಲಾಗಲೇ ಬಾಗಿಲು ಮುಚ್ಚಿತ್ತು ಎಂದು ಹೇಳಿದ್ದಾರೆ.


