Select Page

Advertisement

SDA ನೌಕರ ಆತ್ಮಹತ್ಯೆ ಪ್ರಕರಣ ; ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮುಂಜೂರು

SDA ನೌಕರ ಆತ್ಮಹತ್ಯೆ ಪ್ರಕರಣ ; ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮುಂಜೂರು

ಬೆಳಗಾವಿ : ತಹಶಿಲ್ದಾರ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ರುದ್ರಣ್ಣ ಯಡವಣ್ಣವರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಮೃತ ರುದ್ರಣ್ಣ ಆತ್ಮಹತ್ಯೆಗೆ ಮುಂಚೆ ತನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ, ಎಫ್ ಡಿ ಎ ನೌಕರ ಅಶೋಕ್ ಕಬ್ಬಲಿಗೇರ್ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಆಪ್ತ ಸಹಾಯಕ ಸೋಮು ದೊಡವಾಡಿ ಕಾರಣ ಎಂದು ವಾಟ್ಸಪ್ ಮೆಸೆಜ್ ಕಳುಹಿಸಿದ್ದ. ಈ ಕುರಿತು ನಗರದ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೂವರು ಆರೋಪಿಗಳಿಗೆ ಬೆಳಗಾವಿ 10 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿ ಆದೇಶ ಹೊರಡಿಸಿದೆ.‌ ತಹಶೀಲ್ದಾರ ಬಸವರಾಜ ಪರ ನ್ಯಾಯವಾದಿ ರವಿರಾಜ ಪಾಟೀಲ, ನೌಕರ ಅಶೋಕ್ ಪರ ಆರ್, ಜಿ ಪಾಟೀಲ ಹಾಗೂ ಸೋಮು ಪರವಾಗಿ ವಕೀಲೆ ಪದ್ಮಾ ವಕಾಲತ್ತು ವಹಿಸಿದ್ದರು.

Advertisement

Leave a reply

Your email address will not be published. Required fields are marked *

error: Content is protected !!