ಧಾರವಾಡ : ನಿವೃತ್ತ ಐಜಿಪಿ ಹಾಗೂ ಹುಬ್ಬಳ್ಳಿ ಧಾರವಾಡ ಮಾಜಿ ಪೊಲೀಸ್ ಆಯುಕ್ತ ಬಿ.ಜಿ.ಕೊಕಟನೂರ (79) ದಿನಾಂಕ 26ರಂದು ಸಾಯಂಕಾಲ ಧಾರವಾಡದಲ್ಲಿ ನಿಧನ ಹೊಂದಿದರು.
ಮೃತರು ಪತ್ನಿ, ಓರ್ವ ಪುತ್ರ, ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಸ್ವಗ್ರಾಮ ಹಿಡಕಲ್ ನಲ್ಲಿ ಅಂತ್ಯ ಸಂಸ್ಕಾರ ಸೆ.27ರಂದು ಮಧ್ಯಾಹ್ನ ನಡೆಯಲಿದೆ.