ಬೆಳಗಾವಿ : ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಮಹತ್ವದ ಜವಾಬ್ದಾರಿ ಒಂದನ್ನು ನೀಡಿದೆ.

ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಸ್ಥಾಪಿಸಲಾಗಿರುವ ಈ ಸ್ವತ್ತು ತಾಂತ್ರಿಕ ಕೋಶಕ್ಕೆ ಆಡಳಿತ ಮತ್ತು ತಾಂತ್ರಿಕ ಅಡಚಣೆ ನಿವಾರಿಸಲು ಹಾಗೂ ಪಿಎಮ್ ಯು ಕೋಶ ಮತ್ತು ಸರಕಾರದ ಮಧ್ಯೆ ಸಮನ್ವಯತೆ ಸಾಧಿಸಲು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಕಾರ್ಯದರ್ಶಿಗಳ ವಿಶೇಷ ಅಧಿಕಾರಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. ಜೊತೆಗೆ ಬೆಳಗಾವಿ ಸಿಇಒ ಹುದ್ದೆಗೆ ಚ್ಯುತಿ ಬಾರದಂತೆ ಹೆಚ್ಚುವರಿ ಪ್ರಕಾರದಲ್ಲಿ ನೇಮಿಸಿ ಆದೇಶಿಸಲಾಗಿದೆ.
ಆದರೆ




