ಹಿಂದೂ ವಿರೋಧಿ ಹೇಳಿಕೆ ; ವಿಶ್ವಕಪ್ ನಿಂದ ಪಾಕ್ ನಿರೂಪಕಿ ಗಡಿಪಾರು
ನವದೆಹಲಿ : ಹಿಂದೂ ಮತ್ತು ಭಾರತ ವಿರೋಧಿ ಟ್ವಿಟ್ ಮಾಡಿದ್ದ ಕಾರಣಕ್ಕಾಗಿ ಪಾಕಿಸ್ತಾನದ ಜನಪ್ರಿಯ ಕ್ರೀಡಾ ನಿರೂಪಕಿ ಜೈನಾಜ್ ಅಬ್ಬಾಸ್ ( zainab Abbas ) ನನ್ನು ಭಾರತದಿಂದ ಗಡಿಪಾರು ಮಾಡಲಾಗಿದೆ.
9 ವರ್ಷಗಳ ಹಿಂದೆ ಜೈನಾಬ್ ತಮ್ಮ ಟ್ವಿಟರ್ ಖಾತೆಯಲ್ಲಿ ಭಾರತ ಹಾಗೂ ಹಿಂದೂ ( Hindu ) ಧರ್ಮದ ಕುರಿತು ಅವಹೇಳಕಾರಿ ಪೋಸ್ಟ್ ಮಾಡಿದ್ದಳು. ನಂತರ ಕೆಲ ಟ್ವೀಟ್ ಡಿಲಿಟ್ ಮಾಡಿದ್ದ ಈಕೆಗೆ ಸಧ್ಯ ವಿಶ್ವಕಪ್ ನಿಂದ ಗೆಟ್ ಪಾಸ್ ನೀಡಲಾಗಿದೆ.
2015 ಹಾಗೂ 2019 ರ ವಿಶ್ವಕಪ್ ನಲ್ಲಿ ಕಾರ್ಯ ನಿರ್ವಹಿಸಿದ್ದ ಈಕೆಗೆ 35 ವರ್ಷ ವಯಸ್ಸು. 2014 ರಲ್ಲಿ ಕಾಶ್ಮೀರ, ಹಿಂದೂ ಧರ್ಮ ಹಾಗೂ ಗೋವುಗಳ ಕುರಿತು ಅವಹೇಳಕಾರಿ ಪೋಸ್ಟ್ ಮಾಡಿದ್ದಳು.
ಹಿಂದೂ ಹಾಗೂ ಭಾರತ ವಿರೋಧಿ ಹೇಳಿಕೆ ನೀಡಿದ್ದ ಜೈನಾಬ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಪ್ರಕರಣ ದಾಖಲಿಸಿದ್ದಾರೆ. ಸಧ್ಯ ಭಾರತದಿಂದ ಹೊರ ಹಾಕಿರುವ ನಿರೂಪಕಿ ದುಬೈ ಗೆ ತೆರಳಿದ್ದಾಗಿ ಪಾಕಿಸ್ತಾನದ ಮಾಧ್ಯಮಗಳು ವರದಿ ಮಾಡಿವೆ.

