ಅಪ್ಪನಿಗೆ ಹುಟ್ಟಿದವರು ನನ್ನ ಸಿಡಿ ಬಿಡುಗಡೆ ಮಾಡಲಿ : ಸಿಡಿದ ಯತ್ನಾಳ್
ವಿಜಯಪುರ : ನಾನು ವಕ್ಫ್ ಕುರಿತು ಮಾತನಾಡಿದ್ದಕ್ಕೆ ಖಾದ್ರಿ ನನ್ನ ಸಿಡಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ. ಅಪ್ಪನಿಗೆ ಹುಟ್ಟಿದವರು ನನ್ನ ಸಿಡಿ ಬಿಡುಗಡೆ ಮಾಡಲಿ ಎಂದು ಯತ್ನಾಳ್ ಗುಡುಗಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಖಾದ್ರಿ ಎಂಬ ಒಬ್ಬ ವಕ್ಫ್ ಆಸ್ತಿ ಲೂಟಿಕೋರ, ಹಿಂದೆ ಜಿಲ್ಲೆಯಿಂದ ಗಡೀಪಾರಾಗಿದ್ದವನೊಬ್ಬನು ನಾವು ವಕ್ಫ್ ಆಸ್ತಿಯ ಲೂಟಿಯ ಬಗ್ಗೆ ಪ್ರತಿಭಟನೆಗೆ ಮುಂದಾಗಿರುವಾಗ ನನ್ನ ಸಿ.ಡಿ ಬಿಡುಗಡೆ ಮಾಡುತ್ತೀನಿ ಎಂದು ಹೇಳಿರುವುದನ್ನು ನಾನು ಗಮನಿಸಿದ್ದೇನೆ.
ಹಿಂದೆಯೂ ನಾನು ಹೇಳಿದ್ದೆ “ಅವರ ಅಪ್ಪನಿಗೆ ಯಾರಾದರು ಹುಟ್ಟಿರುವವರು ಬಿಡುಗಡೆ ಮಾಡಲಿ” ಎಂದು, ಈಗ ಅದನ್ನೇ ಪುನರುಚ್ಚರಿಸುತ್ತಿದ್ದೇನೆ. ಇಂತಹ ಅಯೋಗ್ಯರ ಹೇಳಿಕೆಗಳನ್ನು ಕೆಲ ಮಾಧ್ಯಮಗಳು ವೈಭವೀಕರಿಸುತ್ತಿರುವುದನ್ನೂ ಗಮನಿಸಿದ್ದೇನೆ.
ಈಗಾಗಲೇ ಮಾನಹಾನಿ ಪ್ರಕರಣದ ಜೊತೆಗೆ ಕ್ರಿಮಿನಲ್ ಪ್ರಕರಣ ಧಾಖಲಿಸಲು ಮುಂದಾಗಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಗುಡುಗಿದ್ದಾರೆ.

