ಸುಮ್ಮನಿರದಿದ್ರೆ ನಿಮ್ಮ ಸಿಡಿ ಹೊರಬರುತ್ತದೆ ; ಯತ್ನಾಳ್ ಗೆ ಮುಸ್ಲಿಂ ಮುಖಂಡರ ಎಚ್ಚರಿಕೆ
ವಿಜಯಪುರ : ಸುಮ್ಮನಿರದಿದ್ದರೆ ನಿಮ್ಮ ಸೀಡಿ ಹೊರಬರುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ವಿಜಯಪುರ ಮುಸ್ಲಿಂ ಮುಖಮಡರು ಎಚ್ಚರಿಕೆ ನೀಡಿದ್ದಾರೆ.
ಅಕ್ಟೋಬರ್ 15 ರಂದು ವಕ್ಫ್ ಹಠಾವೋ ದೇಶ ಬಚಾವೋ ಆಂದೋಲನದಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ವಿಜಯಪುರ ಮುಸ್ಲಿಂ ಮುಖಂಡರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ನಿಮ್ಮ ಕೆಲಸ ಎಷ್ಟಿದೆ ಅಷ್ಟೇ ಅಷ್ಟು ಮಾಡಿಕೊಂಡು ಹೋಗಿ. ಇಲ್ಲದಿದ್ದರೆ ಬರುವ ನವೆಂಬರ್ 6 ರಂದು ನಿಮ್ಮ ಸಿಡಿ ಬಿಡುಗಡೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ವಿಜಯಪುರರ ಜನರಿಗೆ ಯತ್ನಾಳ್ ಕರೆ ನೀಡಿದ್ದು ಸಾರ್ವಜನಿಕರು ಅಂಗಡಿ, ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.


