Select Page

Advertisement

Breaking –  ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ, ಅಭಿಮಾನಿ ಸಾವು

Breaking –  ಯಶ್ ಬೆಂಗಾವಲು ವಾಹನಕ್ಕೆ ಡಿಕ್ಕಿ, ಅಭಿಮಾನಿ ಸಾವು

ಗದಗ : ರಾಕಿಂಗ್ ಸ್ಟಾರ್ ಯಶ್ ಕಟೌಟ್ ಕಟ್ಟುತ್ತಿದ್ದಾಗ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಮೂವರು ಅಭಿಮಾನಿಗಳು ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿತ್ತು.

ಕುಟುಂಬದವರನ್ನು ಭೇಟಿ ಮಾಡಲು ಯಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ವಾಪಸ್ ತೆರಳುವ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನಕ್ಕೆ ಡಿಕಿ ಹೊಡೆದು ಮತ್ತೋರ್ವ ಅಭಿಮಾನಿ ಮೃತಪಟ್ಟಿದ್ದಾನೆ.

ಘಟನೆಯಲ್ಲಿ ಗಾಯಗೊಂಡಿದ್ದ ಯುವರಕನ್ನು ಭೇಟಿ ಮಾಡಲು ನಟ ಯಶ್ ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಅವರ ಬೆಂಗಾವಲು ವಾಹನಕ್ಕೆ ಅಭಿಮಾನಿ ಬೈಕ್ ಡಿಕ್ಕಿ ಹೊಡೆದಿದ್ದು, ಆತತನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಮಂಗಳವಾರ ಚಿಕಿತ್ಸೆ ಫಲಕಾರಿ ‌ಆಗದೆ ಸಾವಣಪ್ಪಿದ್ದಾನೆ.

ವಿದ್ಯುತ್ ಅವಘಡದಲ್ಲಿ ಸೂರಣಗಿಯ ನಿವಾಸಿಗಳಾದ ಹನುಮಂತ(21), ಮುರುಳಿ(20) ಮತ್ತು ನವೀನ್(21) ಮೃತ ದುರ್ದೈವಿಗಳು. ಘಟನೆಯಲ್ಲಿ ಇತರ ಮೂವರು ಅಭಿಮಾನಿಗಳಿಗೂ ತೀವ್ರವಾಗಿ ಗಾಯಗಳಾಗಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!