ವಿಟಿಯು ಬ್ಯಾಡ್ಮಿಂಟನ್ ಕ್ರೀಡಾಕೂಟ ; ಚೆನೈ ನ SRM Institute ಗೆ ಮೊದಲ ಸ್ಥಾನ
ಬೆಳಗಾವಿ : ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ನಡೆದ ದಕ್ಷಿಣ ಭಾರತದ ಅಂತರ್ ವಿಶ್ವವಿದ್ಯಾಲಯಗಳ ಮಹಿಳೆಯರ ಬ್ಯಾಡ್ಮಿಂಟನ್ ಕ್ರೀಡಾಕೂಟ ಮುಕ್ತಾಯಗೊಂಡಿದ್ದು, ಚೆನೈ ಎಸ್ ಆರ್ ಎಮ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಾಜಿ ತಂಡ ಪ್ರಥಮ ಸ್ಥಾನ ಪಡೆಯಿತು.
ನಾಲ್ಕು ದಿನಗಳ ವರೆಗೆ ನಡೆದ ಕ್ರೀಡಾಕೂಟದಲ್ಲಿ ಒಟ್ಟು 93 ವಿಶ್ವವಿದ್ಯಾಲಯಗಳಿಂದ 500 ಕ್ಕೂ ಅಧಿಕ ಸ್ಪರ್ಧಾಳುಗಳು ಭಾಗವಹಿಸಿದ್ದರು. ಟೂರ್ನಿಯ ನಾಕ್ ಔಟ್ ಹಂತದ 5 ಸುತ್ತುಗಳಲ್ಲಿ 73 ಪಂದ್ಯಗಳು ನಡೆದವು.
ಕ್ವಾರ್ಟರ್ ಫೈನಲ್ಸ್ ಗೆ 8 ತಂಡಗಳು ಅರ್ಹತೆಯನ್ನು ಪಡೆದು, ಇದರಲ್ಲಿ ರಾಯಲಸೀಮಾ ವಿಶ್ವವಿದ್ಯಾಲಯ, ಜೈನ ವಿಶ್ವವಿದ್ಯಾಲಯ , ಬೆಂಗಳೂರು, ಎಸ್ ಆರ್ ಎಮ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಾಜಿ, ತಮಿಳನಾಡು ಹಾಗೂ ಮದ್ರಾಸ್ ವಿಶ್ವವಿದ್ಯಾಲಯ ಸೆಮಿ ಫೈನಲ್ ಗೆ ಅರ್ಹತೆ ಪಡೆದಿದ್ದವು.
ಫೈನಲ್ ಪಂಧ್ಯದಲ್ಲಿ ಎಸ್ ಆರ್ ಎಮ್ ಇನಸ್ಟಿಟ್ಯೂಟ್ ಆಫ್ ಸೈನ್ಸ್ ಆಂಡ್ ಟೆಕ್ನಾಲಾಜಿ ತಂಡ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.
ಶುಕ್ರವಾರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ವಿಟಿಯು ಕುಲಸಚಿವ ಪ್ರೊ. ಬಿ. ಈ. ರಂಗಸ್ವಾಮಿ, ಕುಲಸಚಿವರು(ಮೌಲ್ಯಮಾಪನ) ಪ್ರೊ. ಟಿ.ಎನ್.ಶ್ರೀನಿವಾಸ ಅವರು ವಿಜೇತರಿಗೆ ಪ್ರಶಸ್ತಿ ವೀತರಿಸಿದರು. ಈ ಸಂದರ್ಭದಲ್ಲಿ ಸ್ಥಾನಿಕ ಅಭಿಯಂತರ ವಾಯ್.ಎಸ್.ದೀಕ್ಷಿತ್, ದೈಹಿಕ ಶಿಕ್ಷಣ ನಿರ್ದೇಶಕ ಪುಟ್ಟಸ್ವಾಮಿಗೌಡ, ಟೂರ್ನಮೆಂಟ್ ಸಂಯೋಜಕ ಡಾ. ಪಿ.ವಿ. ಕಡಗದಕೈ ಹಾಗೂ ತೀರ್ಪುಗಾರರು ಸೇರಿದಂತೆ ವಿವಿಧ ಕಾಲೇಜುಗಳ ದೈಹಿಕ ಶಿಕ್ಷಣ ನಿರ್ದೇಶಕರು ಉಪಸ್ಥಿತರಿದ್ದರು.

