ವ್ಯಸನದಿಂದ ದೂರವಿದ್ದಾಗ ಉತ್ತಮ ಬದುಕು ಸಾಧ್ಯ : ಡಾ. ವೀರೇಂದ್ರ ಹೆಗ್ಗಡೆ
ಬೆಳಗಾವಿ : ಭಾಗ್ಯದ ಪಾತ್ರೆಗೆ ಮಧ್ಯವ್ಯಸನದ ರೋಗ ಅಂಟಿಕೊಂಡಿರೂ ಎಲ್ಲವೂ ಸೋರಿ ಹೋಗುತ್ತದೆ. ಉತ್ತಮ ಶಿಕ್ಷಣ ಹಾಗೂ ಒಳ್ಳೆಯ ಆರೋಗ್ಯ ಬದುಕನ್ನು ಸುಂದರವಾಗಿರಿಸುತ್ತದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಶುಕ್ರವಾರ ಬೆಳಗಾವಿ ತಾಲೂಕಿನ ಹುಂಚಾನಟ್ಟಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ವತಿಯಿಂದ ಮೂರು ಯೋಜನಾ ಕಛೇರಿ ಉದ್ಘಾಟಣೆ ಹಾಗೂ ವಿವಿಧ ಸೌಲಭ್ಯಗಳ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು. ನಾವು ಎಲ್ಲವನ್ನೂ ಮತ್ತೊಬ್ಬರ ಮೇಲೆ ಅವಲಂಬನೆ ಇರದೆ ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಮಾತ್ರ ಪರಿಸ್ಥಿತಿ ಸುಧಾರಿಸಲು ಸಾಧ್ಯ. ಮೊದಲಿನ ಬಡತನ ಈಗ ಇಲ್ಲ. ಎಲ್ಲರೂ ಶಿಸ್ತಿನ ಬದುಕು ಕಟ್ಟಿಕೊಳ್ಳುತ್ತಿದ್ದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಲಾಭವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಬೆಳಗಾವಿ ಜಿಲ್ಲೆ ಪ್ರಗತಿಪರ ಜಿಲ್ಲೆಯಾಗಿದ್ದು, 58,000 ಸ್ವ-ಸಹಾಯ ಸಂಘಗಳು ರಚನೆಯಾಗಿದ್ದು, 70 ಕೋಟಿ ಉಳಿತಾಯ ಮಾಡಿರುತ್ತಾರೆ. ಮಕ್ಕಳಿಗೆ ಶಿಕ್ಷಣ ಒಳ್ಳೆಯ ಆಹಾರ ನೀಡುವ ಪ್ರಯತ್ನ ಮುಂದುವರಿದ್ದು ಜನ ಲಾಭ ಪಡೆಯಬೇಕು. ವ್ಯಸನಗಳಿಗೆ ದಾಸರಾಗದೇ ಎಲ್ಲರೂ ಉ್ತಮ ಬದುಕು ರೂಪಿಸಿಕೊಳ್ಳುವ ಕೆಲಸ ಮಾಡಬೇಕು ಎಂದು ಡಾ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ್ ಮಾತನಾಡಿ. ಧರ್ಮಸ್ಥಳ ಸಂಸ್ಥೆಯಿಂದ ಬಡವರಿಗೆ ಆರ್ಥಿಕ ಸಹಾಯವಾಗಿದೆ. ರಾಜ್ಯಾದ್ಯಂತ ಅನೇಕ ರೀತಿಯಲ್ಲಿ ಕುಟುಂಬದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪೂಜ್ಯರಿಗೆ ನೋಬೆಲ್ ಪ್ರಶಸ್ತಿಗೆ ಅರ್ಹರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಸದೆ ಮಂಗಳಾ ಸುರೇಶ ಅಂಗಡಿ, ಕೆ ಎಲ್ ಇ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೊರೆ, ಬ್ಯಾಂಕ್ ಆಪ್ ಮಹಾರಾಷ್ಟ್ರ ವಲಯ ವ್ಯವಸ್ಥಾಪಕ ಸುಚೇತ್ ಡಿಸೋಜಾ, ಯೋಜನೆಯ ಟ್ರಸ್ಟಿ ಡಿ.ಸುರೇಂದ್ರಕುಮಾರ, ಕುಲಸಚಿವರಾದ ಡಾ. ಶಿವಶಂಕರ ಕೆ, ಬಸವರಾಜ ಸೊಪ್ಪಿಮಠ ಸೇರಿದಂತೆ ಸಂಘದ ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.


