Select Page

Advertisement

ವೈರಲ್ ಆಯ್ತು ಶಾಸಕ ವಿನಯ್ ಕುಲಕರ್ಣಿ ವೀಡಿಯೋ ಕಾಲ್ ಪೋಟೋ ; ವಂಚನೆ ಪ್ರಕರಣಕ್ಕೆ ಟ್ವಿಸ್ಟ್

ವೈರಲ್ ಆಯ್ತು ಶಾಸಕ ವಿನಯ್ ಕುಲಕರ್ಣಿ ವೀಡಿಯೋ ಕಾಲ್ ಪೋಟೋ ; ವಂಚನೆ ಪ್ರಕರಣಕ್ಕೆ ಟ್ವಿಸ್ಟ್


ಬೆಂಗಳೂರು : ಚಿನ್ನ ಚಂಚನೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಐಶ್ವರ್ಯ ಗೌಡ ತನಿಖೆಯಲ್ಲಿ ಸ್ಪೋಟಕ ವಿಷಯ ಬೆಳಕಿಗೆ ಬಂದಿದ್ದು, ಶಾಸಕ ವಿನಯ್ ಕುಲಕರ್ಣಿ ಜೊತೆಗಿದ್ದ ಆಪ್ತ ಪೋಟೋಗಳು ವೈರಲ್ ಆಗಿವೆ.‌

ಮಾಜಿ ಸಂಸದ ಡಿ.ಕೆ ಸುರೇಶ್ ಸಹೋದರಿ ಎಂದು ಹೇಳಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ವಂಚಿಸಿದ್ದ ಆರೋಪದ ಹಿನ್ನಲೆಯಲ್ಲಿ ಐಶ್ವರ್ಯ ಗೌಡ ಪೊಲೀಸ್ ಬಲೆಗೆ ಬಿದ್ದಿದ್ದಳು. ಈ ಹಿಂದೆ ಐಶ್ವರ್ಯ ನಡೆಸಿದ್ದ ಕಾರ್ಯಕ್ರಮದಲ್ಲಿ ಶಾಸಕ ವಿನಯ್ ಕುಲಕರ್ಣಿ ಭಾಗವಹಿಸಿದ್ದರ ಪೋಟೋ ವೈರಲ್ ಆಗಿದ್ದವು.

ಚಿನ್ನದ ಕೇಸ್‌ನಲ್ಲಿ ತಮ್ಮ ಹೆಸರು ಕೇಳಿ ಬರುತ್ತಿದ್ದಂತೆ ವಿನಯ್ ಕುಲಕರ್ಣಿ ಅವರು ಐಶ್ವರ್ಯಾ ಗೌಡ ನನಗೆ ಪರಿಚಯ ಅಷ್ಟೇ ಎಂದಿದ್ದರು. ಜೊತೆಗೆ ಪ್ರಕರಣಕ್ಕೆ ಹಾಗೂ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದ್ದರು. ಈ ಮಧ್ಯೆ ಪೋಟೋ ವೈರಲ್ ಆಗಿವೆ.

ಶಾಸಕ ವಿನಯ್ ಕುಲಕರ್ಣಿ ಅವರ ಹೇಳಿಕೆ ಬೆನ್ನಲ್ಲೇ ಕೋಟಿ, ಕೋಟಿ ವಂಚನೆಯ ಆರೋಪಿ ಐಶ್ವರ್ಯಾ ಜೊತೆಗೆ ಶಾಸಕರು ಆಪ್ತರಾಗಿರೋ ಫೋಟೋಗಳು ಲಭ್ಯವಾಗಿದೆ. ವಿನಯ್ ಕುಲಕರ್ಣಿ ವಿಡಿಯೋ ಕಾಲ್‌ನಲ್ಲಿ ಐಶ್ವರ್ಯಾ ಗೌಡ ಚಾಟ್ ಮಾಡುತ್ತಿರೋದು ಫೋಟೋಗಳಲ್ಲಿ ಕಾಣಿಸಿದೆ.

ಗೋಲ್ಡ್ ವಂಚನೆ ಕೇಸಲ್ಲಿ ಐಶ್ವರ್ಯಾ ಗೌಡ ಅವರನ್ನು ಬಂಧಿಸಿರುವ ಇ.ಡಿ ವಿನಯ್ ಕುಲಕರ್ಣಿ ನಿವಾಸದಲ್ಲೂ ಪರಿಶೀಲನೆ ನಡೆಸಿತ್ತು. ಈ ನಡುವೆ ಐಶ್ವರ್ಯಾ-ವಿನಯ್ ಕುಲಕರ್ಣಿ ಅವರ ಫೋಟೋಗಳು ಹೊಸ ಟ್ವಿಸ್ಟ್ ನೀಡಿದೆ.






Advertisement

Leave a reply

Your email address will not be published. Required fields are marked *

error: Content is protected !!