ಅತ್ಯಾಚಾರ ಆರೋಪ ; ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲು
ಬೆಂಗಳೂರು : ಮಹಿಳೆಗೆ ಲೈಂಗಿಕ ಕಿರುಕಿಳ ಹಾಗೂ ಅತ್ಯಾಚಾರದ ಆರೋಪದ ಮೇಲೆ ಕಾಂಗ್ರೆಸ್ ಸಾಸಕ ವಿನಯ್ ಕುಲಕರ್ಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸಮಾಜಿಕ ಕಾರ್ಯಕರ್ತೆ ಹಾಗೂ ರೈತಪರ ಹೋರಾಟಗಾರ್ತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಾಗಿದೆ.
ಎಫ್ಐಆರ್ ನಲ್ಲಿ ಮಹಿಳೆ ವಿನಯ್ ಕುಲಕರ್ಣಿ ವಿರುದ್ಧ ಸಾಲು, ಸಾಲು ಆರೋಪ ಮಾಡಿದ್ದಾಳೆ. 2022 ರಲ್ಲಿ ನನಗೆ ವಿನಯ್ ಕುಲಕರ್ಣಿ ಪರಿಚಯ ಆಗಿತ್ತು. ನನ್ನ ಮೋಬೈಲ್ ಸಂಖ್ಯೆ ಪಡೆದುಕೊಂಡಿದ್ದರು. ನಂತರ ಅವರ ಹೆಬ್ಬಾಳ್ ನಿವಾಸದಲ್ಲಿ ಭೇಟಿಯಾಗಿದ್ದೆ.
ನನಗೆ ಮಧ್ಯರಾತ್ರಿ ವೀಡಿಯೋ ಕಾಲ್ ಮಾಡಿ ಟಾರ್ಚರ್ ನೀಡುತ್ತಿದ್ದರು. ಇಬ್ಬರು ಸಿಗೋಣ ಎಂದು ಆಹ್ವಾನ ನೀಡುತ್ತಿದ್ದರು. ಒಪ್ಪದಿದ್ದಾಗ ರೌಡಿಗಳ ಮೂಲಕ ನನಗೆ ಜೀವ ಬೆದರಿಕೆ ಹಾಕಿದ್ದರು ಎಂದು ಆರೋಪ ಮಾಡಿದ್ದಾಳೆ. ಜೊತೆಗೆ ನನ್ನನ್ನು ಅವರು ನಿರ್ಜಣ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಇನ್ನೂ ಮಹಿಳೆ ವಿರುದ್ಧ ಪ್ರತಿದೂರು ದಾಖಲಾಗಿದ್ದು. ಆಡಿಯೋ ಇಟ್ಟುಕೊಂಡು 2 ಕೋಟಿ ಹಣಕ್ಕೆ ಭೇಡಿಕೆ ಇಟ್ಟಿರುವ ಆರೋಪದ ಮೇಲೆ ಮಹಿಳೆ ವಿರುದ್ಧ ವಿನಯ್ ಕುಲಕರ್ಣಿ ಪ್ರಕರಣ ದಾಖಲಿಸಿದ್ದಾರೆ.


