ವೀಡಿಯೋ ಕಾಲ್ ಇಟ್ಕೊಂಡು ಸೆಕ್ಸ್ ಆರೋಪ ; ವಿನಯ್ ಕುಲಕರ್ಣಿ ಸ್ಪಷ್ಟನೆ
ಬೆಂಗಳೂರು : ಶಾಸಕ ವಿನಯ್ ಕುಲಕರ್ಣಿ ಅವರು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೆ, ಅತ್ಯಾಚರ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು ಈ ಕುರಿತು ಖುದ್ದು ಶಾಸಕರೇ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಕಳೆದ ಮೂರು ವರ್ಷದ ಹಿಂದೆ ಆ ಮಹಿಳೆ ಜೊತೆ ಮಾತನಾಡಿದ್ದೇ. ಆಗ ಮಾಡಿದ್ದ ವೀಡಿಯೋ ಕಾಲ್ ಇಟ್ಟುಕೊಂಡು ಈಗ ಸುಳ್ಳು ಆರೋಪ ಮಾಡುತ್ತಿದ್ದಾಳೆ. ಈ ಕುರಿತು ನಾನು ಪ್ರಕರಣ ದಾಖಲಿಸುವೆ ಎಂದಿದ್ದಾರೆ.
ಸುಳ್ಳು ಆರೋಪ ಮಾಡಲಾಗುತ್ತಿದ್ದು ನಾವು ರಾಜಕಾರಣ ಮಾಡುವುದೇ ಕಷ್ಟವಾಗುತ್ತಿದೆ. ಆ ಹೆಣ್ಣುಮಗಳನ್ನು ಮುಟ್ಟಿದರೆ ನಾನು ನನ್ನ ತಾಯಿಯನ್ನು ಮುಟ್ಟಿದಂತೆ ಎಂದು ವಿನಯ್ ಕುಲಕರ್ಣಿ ತಮ್ಮ ಮೇಲಿನ ಆರೋಪಕ್ಕೆ ಸ್ಪಷ್ಟೀಕರಣ ನೀಡಿದ್ದಾರೆ.
ಇನ್ನೂ ಮಹಿಳೆಯೊಬ್ಬರು ತಮ್ಮ ಮೇಲೆ ಅತ್ಯಾಚಾರ ಆಗಿದೆ ಎಂದು ಆರೋಪಿಸಿ ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದು ವಿನಯ್ ಕುಲಕರ್ಣಿ ತನಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆಕೆ ಆರೋಪ ಮಾಡಿದ್ದಾಳೆ.


