Select Page

Advertisement

ವಿಜಯಪುರದಲ್ಲಿ ವಿಮಾನ ಪಲ್ಟಿ ; ಪೈಲಟ್ ಪ್ರಾಣಾಪಾಯದಿಂದ ಪಾರು Video

ವಿಜಯಪುರದಲ್ಲಿ ವಿಮಾನ ಪಲ್ಟಿ ; ಪೈಲಟ್ ಪ್ರಾಣಾಪಾಯದಿಂದ ಪಾರು Video



ವಿಜಯಪುರ : ತರಬೇತಿ ನಿರತ ವಿಮಾನ ಪತನವಾದ ಘಟನೆ ‌ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಮಂಗಳೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ಮೂರು ಗಂಟೆಗೆ ನಡೆದಿದೆ.

ಕಲಬುರಗಿ ಇಂದ ಬೆಳಗಾವಿಗೆ ತೆರಳುತ್ತಿದ್ದ ರೆಡ್ ಬರ್ಟ್ ಏವಿಯೇಷನ್‌ ಸೇರಿರುವ ತರಬೇತಿ ವಿಮಾನ ಮಂಗಳೂರು ಗ್ರಾಮದ ಹೊರವಲಯದಲ್ಲಿ ‌ಪತನವಾಗಿದೆ.

ಘಟನೆಯಲ್ಲಿ ಇಬ್ಬರು ಪೈಲಟ್ಗಳು ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಮತ್ತು‌ ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಕುರಿತು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾತಮಾಡಿ. ತಲೆ ಕೆಳಗಾಗಿ ವಿಮಾನ ಪತನವಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಬರಬೇಕು ಎಂದರು.

Advertisement

Leave a reply

Your email address will not be published. Required fields are marked *

error: Content is protected !!