ಬೆಳಗಾವಿ : ಧ್ವಜಸ್ಥಂಭ ಕಟ್ಟುವಾಗ ವಿದ್ಯುತ್ ಅವಘಡ, ಯುವಕ ಸಾವು
ಬೈಲಹೊಂಗಲ : ರಾಜ್ಯೋತ್ಸವ ಹಿನ್ನಲೆಯಲ್ಲಿ ಬಾವುಟ ಕಟ್ಟಲು ಧ್ವಜಸ್ಥಂಭ ನೆಡುವಾಗ ವಿದ್ಯುತ್ ತಂತಿ ಸ್ಪರ್ಶಿಸಿ ಯುವಕನೋರ್ವ ಸಾವಣಪ್ಪಿರುವ ಘಟನೆ ಬೈಲಹೊಂಗಲದ ವಕ್ಕುಂದ ಗ್ರಾಮದಲ್ಲಿ ನಡೆದಿದೆ.
ಪ್ರಜ್ವಲ್ ಚನ್ನಗೌಡ ಮುನೇಪ್ಪನವರ(18) ಮೃತ ಯುವಕ. ಧ್ವಜಸ್ಥಂಭ ನೆಡುವ ವೇಳೆ ಆಕಸ್ಮಿಕ ವಿದ್ಯುತ್ ಪ್ರವಹಿಸಿ ಸಾವು ಸಂಭವಿಸಿದೆ.
ಗ್ರಾಮದ ಬಸ್ ನಿಲ್ದಾಣದ ಬಳಿ ಧ್ವಜ ಸ್ಥಂಭ ನೆಡುತ್ತಿದ್ದರು. ಈ ಸಂದರ್ಭದಲ್ಲಿ ವಿದ್ಯುತ್ ತಂತಿ ತಗುಲಿದೆ. ಕೂಡಲೇ ತಾಲೂಕು ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಾವಣಪ್ಪಿದ್ದಾರೆ.


