ಪೇಜಾವರ ಶ್ರೀಗಳ ಮುಗ್ಧ ಮನಸ್ಸು ; ಮತ್ತೆ ವೈರಲ್ ಆಯ್ತು ಹಳೇ ವೀಡಿಯೋ
ಬೆಳಗಾವಿ : ಸದಾಕಾಲವೂ ಲೋಕ ಉದ್ಧಾರಕ್ಕಾಗಿ ಶ್ರಮಿಸುತ್ತಿದ್ದ ಆಧ್ಯಾತ್ಮಿಕ ಜೀವಿ ಉಡುಪಿಯ ಪೂಜ್ಯ ಪೇಜಾವರ ಶ್ರೀಗಳು ಈಗ ನೆನಪು ಮಾತ್ರ. ಆದರೆ ಈ ಹಿಂದೆ ನಡೆದ ಘಟನೆಯ ವೀಡಿಯೋ ಸಧ್ಯ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಕಳೆದ ಜ.22 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠಾಪನಾ ಸಮಾರಂಭದ ಸಂದರ್ಭದಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳನ್ನು ಕೋಟ್ಯಾಂತರ ಜನ ನೆನೆದರು. ಈ ಸಂದರ್ಭದಲ್ಲಿ ಪೂಜ್ಯರ ಉಪಸ್ಥಿತಿ ಇರಬೇಕಿತ್ತು ಎಂದು ನೊಂದವರೇ ಹೆಚ್ಚು.
ಈ ಹಿಂದೆ ಭಕ್ತರೊಬ್ಬರು ಶ್ರೀಗಳ ದರ್ಶನ ಪಡೆಯಲು ಬಂದ ಸಂದರ್ಭದಲ್ಲಿ ಅವರ ಪುಟ್ಟ ಮಗು ಒಂದು ಶ್ರೀಗಳ ಬಳಿ ತೆರಳಿ ಕೆಣ್ಣೆಗೆ ಮುತ್ತಿಡುತ್ತದೆ. ಆಗ ಪೇಜಾವರ ಶ್ತೀಗಳು ಸಂಭ್ರಮಿಸಿದ್ದ ರೀತಿ ಅದ್ಬುತ. ಮಗುವಿನ ಜೊತೆ ಮಗುವಾಗಿ ಚಪ್ಪಾಳೆ ತಟ್ಟಿದ್ದು ಅದ್ಬುತ.
ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ್ಗೆ ಬರುವ ಇಂತಹ ವೀಡಿಯೋಗಳನ್ನು ಜನರ ಮನಸ್ಸನ್ನು ಪುಳಕಿತ ಮಾಡುತ್ತವೆ ಎಂಬುದು ಅಷ್ಟೇ ಸತ್ಯ. ಪೂಜ್ಯ ಪೇಜಾವರ ಶ್ರೀಗಳು ಈಗ ನಮ್ಮಿಂದ ದೂರ ಆಗಿರಬಹುದು ಆದರೆ ಅವರ ನೆನಪು ಮಾತ್ರ ಸದಾಕಾಲವೂ ಹಚ್ಚ ಹಸಿರು.


