ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರ ಹತ್ಯೆ
ಉಡುಪಿ : ಮನೆಗೆ ನುಗ್ಗಿ ಒಂದೇ ಕುಟುಂಬದ ನಾಲ್ವರನ್ನು ಚಾಕುವಿನಿಂದ ಇರುವ ಹತ್ಯೆ ಮಾಡಿರುವ ಘಟನೆ ಉಡುಪಿಯ ತೃಪ್ತಿನಗರದಲ್ಲಿ ನಡೆದಿದೆ.
ಹಸೀನಾ ( 46 ) ಎಂಬುವವರ ಮನೆಗೆ ನಿನ್ನೆ ರಾತ್ರಿ ಬೈಕ್ ಮೇಲೆ ಬಂದ ವ್ಯಕ್ತಿಯೋರ್ವ ತಾಯಿ ಹಾಗೂ ಮೂವರು ಮಕ್ಕಳಿಗೆ ಚಾಕುವಿನಿಂದ ಇರಿದಿದ್ದಾನೆ. ಘಟನೆಯಿಂದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಎಸ್ಪಿ ಅರುಣ್ ಕುಮಾರ್ ಭೇಟಿ ನೀಡಿದ್ದು ತನಿಖೆ ಮುಂದುವರಿಸಿದ್ದಾರೆ. ಇನ್ನೂ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತ ಮಹಿಳೆ ಪತಿ ಬೇರೆ ದೇಶದಲ್ಲಿ ವಾಸವಿದ್ದಾರೆ.


