Select Page

Advertisement

ಬೆಳಗಾವಿ : Tv9 ಹೆಸರು ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಕಲಿ ‌ಪತ್ರಕರ್ತನ ಬಂಧನ

ಬೆಳಗಾವಿ : Tv9 ಹೆಸರು ಹೇಳಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಕಲಿ ‌ಪತ್ರಕರ್ತನ ಬಂಧನ

ಬೆಳಗಾವಿ : Tv9 ಮರಾಠಿ ವಾಹಿನಿಯ ವಿಭಾಗದ ಮುಖ್ಯಸ್ಥ ಎಂದು ಹೇಳಿ ಬೆಳಗಾವಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ನಕಲಿ ಪತ್ರಕರ್ತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಮಂಗಳವಾರ ಬೆಳಗಾವಿಯಲ್ಲಿ ನಡೆದಿದೆ.

ರಮಜಾನ್ ಮುಜಾವರ್ ಎಂಬ ವ್ಯಕ್ತಿ ಜಿಲ್ಲೆಯ ಅಥಣಿ ತಾಲೂಕು ಸೇರಿದಂತೆ ಅನೇಕ ಭಾಗಗಳಲ್ಲಿ ನಾನು tv9 ಮರಾಠಿ ವಾಹಿನಿಯ ಮಹಾರಾಷ್ಟ್ರ ಪಶ್ಚಿಮ ವಲಯದ ಮುಖ್ಯಸ್ಥ ಎಂದು ಹೇಳಿ ಜನರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ.

ಈ ವಿಚಾರ ತಿಳಿದ TV9 ಕನ್ನಡ ವಾಹಿನಿಯ ಬೆಳಗಾವಿ ಜಿಲ್ಲಾ ವರದಿಗಾರ ಸಹದೇವ್ ಮಾನೆ ಮುಖ್ಯಸ್ಥರ ಗಮನಕ್ಕೆ ತಂದು ಆರೋಪಿಯನ್ನು ನಗರದ ಸಾಹಿತ್ಯ ಭವನದಲ್ಲಿ ಹಿಡಿದಿದ್ದರಾರೆ. ನಂತರ ನಗರ ಪೊಲೀಸ್ ಆಯುಕ್ತರಿಗೆ ಮಾಹಿತಿ‌ ನೀಡಿ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ.

ಆರೋಪಿಯನ್ನು ಮಾರ್ಕೆಟ್ ಪೊಲೀಸ್ ಠಾಣೆ ಸಿಬ್ಬಂದಿ ವಶಕ್ಕೆ ಪಡೆದು ಎಫ್ಐಆರ್ ದಾಖಲಿಸಿದ್ದಾರೆ. ಜಿಲ್ಲೆಯ ಅನೇಕ ಭಾಗಗಳಲ್ಲಿ ನಕಲಿ ಪತ್ರಕರ್ತರ ಹಾವಳಿ ಜೋರಾಗಿದ್ದು ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜನ ಆಗ್ರಹಿಸಿದ್ದಾರೆ‌.

Advertisement

Leave a reply

Your email address will not be published. Required fields are marked *

error: Content is protected !!