Select Page

Advertisement

ಅತ್ತೆಯಿಂದಲೇ ವೇಶ್ಯಾವಾಟಿಕೆಗೆ ಒತ್ತಾಯದ ಆರೋಪ‌ ; ಕಿರುಕುಳ ತಾಳಲಾರದೆ ಸೊಸೆ ಆತ್ಮಹತ್ಯೆ…!

ಅತ್ತೆಯಿಂದಲೇ ವೇಶ್ಯಾವಾಟಿಕೆಗೆ ಒತ್ತಾಯದ ಆರೋಪ‌ ; ಕಿರುಕುಳ ತಾಳಲಾರದೆ ಸೊಸೆ ಆತ್ಮಹತ್ಯೆ…!

ಬೀದರ್ : ಬೀದರ್ (Bidar ) ನಲ್ಲಿ ಘನಘೋರ ದುರಂತ ನಡೆದಿದೆ. ಸ್ವಂತ ಅತ್ತೆಯೇ ಸೊಸೆಗೆ ವೇಶ್ಯಾವಾಟಿಕೆ (Prostitution) ನಡೆಸುವಂತೆ ಒತ್ತಾಯಿಸಿದ್ದು, ಮನನೊಂದ ಯುವತಿ ಸೂಸೈಡ್ ಮಾಡಿಕೊಂಡಿದ್ದಾಳೆ.

ಬಸವಕಲ್ಯಾಣದ ಓಂ ಬಡಾವಣೆಯಲ್ಲಿ ಘಟನೆ ನಡೆದಿದೆ. ಅಂಜನಾಬಾಯಿ ಶೇಖರ್ ಪಾಟೀಲ್(22) ಮೃತ ಯುವತಿಯಾಗಿದ್ದು, ಪತಿ ಮನೆಯವರಿಂದ ನಿತ್ಯ ಕಿರುಕುಳ ಹಿನ್ನೆಲೆ ಮನನೊಂದು ಈಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

2022ರಲ್ಲಿ ಬಸವಕಲ್ಯಾಣದ ಶೇಖರ್ ಪಾಟೀಲ್ ಜತೆ ಅಂಜನಾಬಾಯಿ ವಿವಾಹ ನಡೆದಿದ್ದು, ಮದುವೆ ಬಳಿಕ ವೇಶ್ಯಾವಾಟಿಕೆ ಮಾಡುವಂತೆ ಒತ್ತಾಯಿಸಿ ಯುವತಿಗೆ ನಿತ್ಯವೂ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.

ಅಂಜನಾಬಾಯಿ ಪತಿ ಶೇಖರ್ ಪಾನಿಪುರಿ ವ್ಯಾಪಾರ ಮಾಡಿಕೊಂಡಿದ್ದ ಎನ್ನಲಾಗಿದ್ದು, ನಿತ್ಯವೂ ರಾತ್ರಿ 11-12 ಗಂಟೆ ಅವಧಿಯಲ್ಲಿ ಮನೆಗೆ ಬರುತ್ತಿದ್ದ. ಈ ಬಗ್ಗೆ ತಕರಾರು ಮಾಡಿದ್ದ ಅಂಜನಾಬಾಯಿ ಬೇಗ ಮನೆಗೆ ಬನ್ನಿ ಎಂದಿದ್ದಳು.

ಇದೇ ವಿಚಾರವಾಗಿ ಅತ್ತೆ ಮಾವ ಆಕೆ ಜೊತೆ ಜಗಳ ಮಾಡಿದ್ದಾರೆ. ನೀನು ವೇಶ್ಯಾವಾಟಿಕೆ ಮಾಡು ಎಂದು ಆಕೆಯನ್ನು ಪೀಡಿಸಿದ್ದು, ಇದ್ರಿಂದ ಮನನೊಂದ ಅಂಜನಾಬಾಯಿ ಸೂಸೈಡ್ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!