ಚಂದ್ರಯಾನ – 03 ಯಶಸ್ವಿ ಲ್ಯಾಂಡಿಂಗ್ ಸಂಭ್ರಮಿಸಿದ ನಟಿ ಸನ್ನಿ ಲಿಯೋನ್ – Video
ಬೆಂಗಳೂರು : ನಿನ್ನೆಯಷ್ಟೇ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಉಡಾವಣೆ ಮಾಡಿದ್ದ ಚಂದ್ರಯಾನ – ೦೩ ಉಪಗ್ರಹ ಯಶಸ್ವಿಯಾದ ಸಂದರ್ಭವನ್ನು ಕಣ್ತುಂಬಿಕೊಂಡ ಖ್ಯಾತ ನಟಿ ಸನ್ನಿ ಲಿಯೋನ್ ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಚಂದ್ರಯಾನ – ೦೩ ಯ ಪ್ರಜ್ಞಾನ್ ನೌಕೆ ಚಂದ್ರನ ದಕ್ಷಿಣ ಕಕ್ಷೆಯಲ್ಲಿ ಯಶಸ್ವಿಯಾಗಿ ಇಳಿಯುತ್ತಿದ್ದಂತೆ ಇಡೀ ವಿಶ್ವವೇ ಸಂಭ್ರಮಿಸಿತ್ತು. ಈ ಸಂದರ್ಭದಲ್ಲಿ ಲೈವ್ ವೀಡಿಯೋ ವೀಕ್ಷಣೆ ಮಾಡುತ್ತಿದ್ದ ನಟಿ ಸನ್ನಿ ಅತ್ಯಂತ ಸಡಗರದಿಂದ ಸಂಭ್ರಮಿಸುವ ಮೂಲಕ ವೀಡಿಯೋ ಹರಿಬಿಟ್ಟಿದ್ದಾರೆ.
ಚಂದ್ರಯಾನ ವೀಕ್ಷಣೆ ಮಾಡುತ್ತಿದ್ದ ನಟಿ ಸನ್ನಿ ಲಿಯೋನ್ ಅವರ ವೀಡಿಯೋ ಟ್ವಿಟರ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಸನ್ನಿ ವಿದೇಶಿ ಮೂಲದವಳಾಗಿದ್ದರು ಸಧ್ಯ ಭಾರತದಲ್ಲೇ ನೆಲಿಸಿದ್ದು, ಅನೇಕ ಸಾಮಾಜಿಕ ಕಾರ್ಯದ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿದ್ದಾಳೆ.


