Select Page

ಅಧಿವೇಶನ ಕರ್ತವ್ಯದ ಮಧ್ಯೆ ಎಸ್ಪಿ ಫೋನ್ ಇನ್ ಕಾರ್ಯಕ್ರಮ : ಸಮಸ್ಯೆ ಹೇಳಿಕೊಂಡ ಜಿಲ್ಲೆಯ ಜನ

ಅಧಿವೇಶನ ಕರ್ತವ್ಯದ ಮಧ್ಯೆ ಎಸ್ಪಿ ಫೋನ್ ಇನ್ ಕಾರ್ಯಕ್ರಮ : ಸಮಸ್ಯೆ ಹೇಳಿಕೊಂಡ ಜಿಲ್ಲೆಯ ಜನ

ಬೆಳಗಾವಿ : ಜಿಲ್ಲೆಯ ಜನರ ಸಮಸ್ಯೆ ಆಲಿಸುವ ನಿಟ್ಟಿನಲ್ಲಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್  ನೇತೃತ್ವದಲ್ಲಿ ಪೋನ್ ಇನ್ ಕಾರ್ಯಕ್ರಮ ನಡೆಯಿತು. ಅಧಿವೇಶನ ನಡುವೆಯೂ ಇವತ್ತಿನ ಬಿಡುವಿನ ಸಮಯದಲ್ಲಿ ಜಿಲ್ಲೆಯ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮುಂದುವರಿದೆ.

ಶನಿವಾರ ಬೆಳಿಗ್ಗೆ 11 ಗಂಟೆಯಿಂದ ಪ್ರಾರಂಭವಾದ ಪೋನ್ ಇನ್ ಕಾರ್ಯಕ್ರಮಕ್ಕೆ ಜಿಲ್ಲೆಯ ನಾನಾ ಭಾಗಗಳಿಂದ ಕರೆ ಮಾಡುತ್ತಿರವ ಸಾರ್ವಜನಿಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕೇಳಿದರು. ಗ್ರಾಮದಲ್ಲಿ ಅಕ್ರಮ ಸಾರಾಯಿ ಮಾರಾಟ, ಅಕ್ರಮ ಪಡಿತರ ಸಂಗ್ರಹ, ರಸ್ತೆ ಸಮಸ್ಯೆ, ಟ್ರಾಫಿಕ್ ಸಮಸ್ಯೆ ಸೇರಿದಂತೆ ನಾನಾ ಬಗೆಯ ತೊಂದರೆಗಳನ್ನು ಹೇಳಿಕೊಂಡರು.

ಜಿಲ್ಲೆಯ ಅಥಣಿ, ಸವದತ್ತಿ ಹಾಗೂ ರಾಯಬಾಗ ತಾಲೂಕಿನಲ್ಲಿ ನಡೆಯುತ್ತಿರುವ ಅಕ್ರಮ ಸಾರಾಯಿ ಮಾರಾಟ ತಡೆಯುವಂತೆ ಸಾರ್ವಜನಿಕರು ಎಸ್ಪಿ ಬಳಿ ವಿನಂತಿಸಿಕೊಂಡರು. ಜೊತೆಗೆ ಸಾರ್ವಜನಿಕ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆ ಸೇರಿದಂತೆ ವೈಯಕ್ತಿಕ ಸಮಸ್ಯೆ ಪರಿಹಾರಕ್ಕಾಗಿ ಕೇಳಿಕೊಂಡರು. ಇನ್ನೂ ಅನೇಕ ಗ್ರಾಮಗಳಲ್ಲಿ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾರ್ವಜನಿಕರು ಫೋನ್ ಇನ್ ಕಾರ್ಯಕ್ರಮದಲ್ಲಿ ಕೇಳಿಕೊಂಡರು.

ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಟ್ರಾಫೀಕ್ ಸಿಗ್ನಲ್, ರೈಲ್ವೆ ನಿಲ್ದಾಣದ ಬಳಿ ಇರುವುದೇ ಇಲ್ಲ‌‌. ಆದ್ದರಿಂದ ಇಲ್ಲಿನ ಸಿಗ್ನಲ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ನಗರ ಪೊಲೀಸ್ ಇಲಾಖೆಗೆ ತಿಳಿಸಲಾಗುವುದು ಎಂದರು. ಗೋಕಾಕ ತಾಲೂಕಿನ‌ ಬಸವೇಶ್ವರ ವೃತ್ತದಿಂದ‌ ಕೋಟ್೯ ಗೇಟ್ ವರೆಗೆ ಬ್ಯಾರಿಕೆಡ್ ಅಳವಡಿಸುವಂತೆ ಮಹಿಳೆಯೊರ್ವರು ಕೇಳಿಕೊಂಡರು. ಗೋಕಾಕ ಪೊಲೀಸರಿಗೆ ತಿಳಿಸಿ ಅದನ್ನು ಅಳವಡಿಸಲಾಗುವುದು ಎಂದರು.

ಅಥಣಿ ತಾಲೂಕಿನಿಂದಲೂ ಬಹುತೇಕ ಎಸ್ಪಿ ಡಾ. ಸಂಜೀವ ಪಾಟೀಲ ಅವರಿಗೆ ಕರೆ ಮಾಡಿ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ. ದೇವಸ್ಥಾನದ ಆವರಣದ ಪಕ್ಕದಲ್ಲಿಯೇ ಅಕ್ರಮ ಸರಾಯಿ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು. ಇವರಿಗೆ ಉತ್ತರಿಸಿದ ಎಸ್ಪಿ ಡಾ. ಸಂಜೀವ ಪಾಟೀಲ ಅವರು, ತತಕ್ಷಣ ಅದರ ಮೇಲೆ‌ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಖಾನಾಪುರ‌ ತಾಲೂಕಿನಲ್ಲಿ ಬಸ್ಸಿನ ಸಮಸ್ಯೆ ಬಗೆ ಹರಿಸಿ. ಇಲ್ಲಿ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಸ್ಪಂದಿಸಿದ ಎಸ್ಪಿ ಕೆಎಸ್ ಆರ್ ಟಿಸಿ ಡಿಸಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದರು. ಚಿಕ್ಕೋಡಿಯ ಶಾಲಾ ಆವರಣದ ಹೊರಗಡೆ ತಂಬಾಕು ಹಾಗೂ ಸಿಗರೆಟ್ ಮಾರಾಟ ಮಾಡುತ್ತಾರೆ ಕ್ರಮ ಕೈಗೊಳ್ಳಬೇಕೆಂದು ವ್ಯಕ್ತಿಯೊರ್ವ ಅಳಲು ತೋಡಿಕೊಂಡರು. ಇದಕ್ಕೆ ತತಕ್ಷಣವೆ ದಾಳಿ ನಡೆಸಿ ಬಂದ್ ಮಾಡಿಸಲಾಗುವುದು ಎಂದು ಎಸ್ಪಿ ತಿಳಿಸಿದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಮಹಾನಿಂಗ ನಂದಗಾವಿ, ಪೊಲೀಸ್ ಇನಸ್ಪೆಕ್ಟರ್‌ಗಳಾದ  ಬಿ.ಆರ್. ಗಡ್ಡೇಕರ, ಶರಣಬಸಪ್ಪ ಅಜೂರ, ಮಹಾದೇವ ಎಸ್.ಎಂ., ಬಾಳಪ್ಪ ತಳವಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!