Select Page

Advertisement

VIDEO : ಗಾಯಕ ವಿಜಯಪ್ರಕಾಶ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಸಮೂಹ

VIDEO : ಗಾಯಕ ವಿಜಯಪ್ರಕಾಶ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಸಮೂಹ

ಬೆಳಗಾವಿ : ಐತಿಹಾಸಿಕ ಕಿತ್ತೂರು ಉತ್ಸವದ ಕೊನೆಯ ದಿನ ಖ್ಯಾತ ಸಂಗೀತಗಾರ ವಿಜಯಪ್ರಕಾಶ್ ಹಾಗೂ ತಂಡದ ಹಾಡುಗಳಿಗೆ ಸಾವಿರಾರು ಜನ ಕುಣಿದು ಕುಪ್ಪಳಿಸಿದರು.

ಕಿತ್ತೂರು ಕೋಟೆ ಆವರಣದಲ್ಲಿ ನಡೆದ ಕಾರ್ಯಕ್ರಮದ ಎರಡನೇ ದಿನವಾದ ಶುಕ್ರವಾರ ಸಮಾರೋಪ ಸಮಾರಂಭದಲ್ಲಿ ಸಂಗೀತ ಸಂಜೆ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ವಿಜಯ್ ಪ್ರಕಾಶ್ ಅವರ ಗಾಯನಕ್ಕೆ ಯುವ ಸಮೂಹ ಕುಣಿದು ಕುಪ್ಪಳಿಸಿತು. ಅಷ್ಟೇ ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನೋಡುಗರ ಮನಸೂರೆಗೊಂಡವು.

ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟಿಷರ ವಿರುದ್ಧ  ಹೋರಾಡಿದ್ದರು. ಆದರೆ ಇತಿಹಾಸದ ಪಾಠಗಳಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಅವರು ಬ್ರಿಟೀಷರ ವಿರುದ್ಧ ಹೋರಾಡಿದ ಮೊದಲ ಮಹಿಳೆ ಎಂಬ ತಪ್ಪು ಮಾಹಿತಿ ಇದೆ. ಇದನ್ನು ಸರಿಪಡಿಸುವ ಅಗತ್ಯವಿದೆ ಎಂದು ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಎಂ.ರಾಮಚಂದ್ರಗೌಡ ಅವರು ಪ್ರತಿಪಾದಿಸಿದರು.

ಜಿಲ್ಲಾಡಳಿತ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಯ ಆಶ್ರಯದಲ್ಲಿ ಚನ್ನಮ್ಮನ ಕಿತ್ತೂರಿನ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಎರಡು ದಿನಗಳ ಕಿತ್ತೂರು ಉತ್ಸವ-2021 ರ ಸಮಾರೋಪದ ಸಮಾರಂಭದಲ್ಲಿ ಅವರು ಸಮಾರೋಪ ನುಡಿಗಳನ್ನಾಡಿದರು.

ಕಿತ್ತೂರು ನಾಡಿನ ಜನರು ಸ್ವಾಭಿಮಾನಿಗಳು ಹಾಗೂ ದೇಶಪ್ರೇಮಿಗಳಾಗಿದ್ದಾರೆ. ಕಿತ್ತೂರು ಹಾಗೂ ಹಿರೇಬಾಗೇವಾಡಿ ಮಧ್ಯೆ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಎಲ್ಲರ ಗಮನಸೆಳೆಯುವ ಹಾಗೆ ನಿರ್ಮಿಸಲಾಗುವುದು ಎಂದು ಅವರು ಭರವಸೆ ನೀಡಿದರು.

Advertisement

Trackbacks/Pingbacks

  1. VIDEO : ಕಿತ್ತೂರು ಉತ್ಸವದಲ್ಲಿ ಯುವಕರ ಮಾರಾಮಾರಿ : ವೀಡಿಯೋ ವೈರಲ್ - Belagavivoice - […] VIDEO : ಗಾಯಕ ವಿಜಯಪ್ರಕಾಶ ಹಾಡಿಗೆ ಕುಣಿದು ಕುಪ್ಪಳಿಸಿದ ಯುವಸಮೂಹ https://belagavivoice.com/singer_vijayprakash_show_kitturu/#.YXY9Bvr8yZZ.whatsapp […]

Leave a reply

Your email address will not be published. Required fields are marked *