Select Page

Advertisement

Video – ರಾಮನಿಗಾಗಿ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ

Video – ರಾಮನಿಗಾಗಿ ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ

ಮುಂಬೈ : ಮುಂಬರುವ ಜನವರಿ 22 ರಂದು ಅಯೋಧ್ಯೆ ಶ್ರೀರಾಮ‌‌ ಮಂದಿರ ಉದ್ಘಾಟನೆ ನಡೆಯಲಿದ್ದು ಭರ್ಜರಿ ಸಿದ್ಧತೆ ನಡೆಯುತ್ತಿದೆ. ಐತಿಹಾಸಿಕ ಕ್ಷಣ ಕಣ್ತುಂಬಿಕೊಳ್ಳಲು ಜನ ಕಾತರರಾಗಿ ಕಾಯುತ್ತಿದ್ದಾರೆ.

ರಾಮ ಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಈಗಾಗಲೇ ದೇಶಾದ್ಯಂತ ಲಕ್ಷಾಂತರ ಜನ ಅಯೋಧ್ಯೆಗೆ ಭೇಟಿ ನೀಡುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಮುಂಬೈ ಮೂಲದ ಮುಸ್ಲಿಂ ಯವತಿಯೊಬ್ಬಳು ರಾಮನಿಗಾಗಿ ಅಯೋಧ್ಯೆ ವರೆಗೂ ಪಾದಯಾತ್ರೆ ಹೊರಟಿದ್ದಾಳೆ.

ಶ್ರೀರಾಮನ ದರ್ಶನಕ್ಕಾಗಿ ಮುಂಬೈನ ಮುಸ್ಲಿಂ ಯುವತಿ ಶಬನಮ್‌ ಶೇಖ್‌ ಅವರು ಅಯೋಧ್ಯೆಗೆ ಪಾದಯಾತ್ರೆ ಹೊರಟಿದ್ದಾರೆ. ಮಾರ್ಗದ ಮಧ್ಯೆ ಶ್ರೀರಾಮನ ಭಕ್ತರನ್ನು ಭೇಟಿಯಾಗುತ್ತ, ಜೈ ಶ್ರೀರಾಮ್‌ ಎಂದು ಘೋಷಣೆ ಕೂಗುತ್ತ ಸಾಗುತ್ತಿರುವ ಇವರ ವಿಡಿಯೊಗಳು ಭಾರಿ ವೈರಲ್‌ ಆಗಿವೆ.

ನಿತ್ಯವೂ ಪಾದಯಾತ್ರೆಯ ವಿಡಿಯೊಗಳನ್ನು ಶಬನಮ್‌ ಅವರು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಿದ್ದು, ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಮಾಡಲಿದ್ದಾರೆ. ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈಗಾಗಲೇ ಸಾವಿರಾರು ಗಣ್ಯರಿಗೆ ರಾಮಮಂದಿರ ಟ್ರಸ್ಟ್‌ನಿಂದ ಆಹ್ವಾನ ಕಳುಹಿಸಲಾಗಿದೆ. ಭರದ ಸಿದ್ಧತೆಯನ್ನೂ ನಡೆಸಲಾಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!