Select Page

Advertisement

ಮರಗಾಲು ಕಟ್ಟಿ ಶ್ರೀಶೈಲಕ್ಕೆ ಪಾದಯಾತ್ರೆ ; 400 ಕಿ.ಮೀ ನಡೆದು ದಾಖಲೆ ಸೃಷ್ಟಿಸಿದ ಯುವತಿ..! Video

ಮರಗಾಲು ಕಟ್ಟಿ ಶ್ರೀಶೈಲಕ್ಕೆ ಪಾದಯಾತ್ರೆ ; 400 ಕಿ.ಮೀ ನಡೆದು ದಾಖಲೆ ಸೃಷ್ಟಿಸಿದ ಯುವತಿ..! Video



ಬೆಳಗಾವಿ : ಯುಗಾದಿ ಹಿನ್ನಲೆಯಲ್ಲಿ ಆಂದ್ರಪ್ರದೇಶದ ಶ್ರೀಶೈಲ Shrishilam ಮಲ್ಲಿಕಾರ್ಜುನ ದೇವಸ್ಥಾನದ ಜಾತ್ರಾ ಮಹೋತ್ಸವ ಹಿನ್ನಲೆಯಲ್ಲಿ ಕರ್ನಾಟಕದಾದ್ಯಂತ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ತೆರಳಿದ್ದಾರೆ.

ಹೋಳಿ ಹುಣ್ಣಿಮೆಯ ದಿನದಂತು ಪಾದಯಾತ್ರೆ ಮೂಲಕ ಉತ್ತರ ಕರ್ನಾಟಕ ಭಾಗದ ಭಾಗಶಃ ಎಲ್ಲಾ ಜಿಲ್ಲೆಗಳಿಂದ ಭಕ್ತರು ಪಾದಯಾತ್ರೆ ಮಾಡುತ್ತಾರೆ. ಇದರಲ್ಲಿ ಕೆಲವರು ಮರಗಾಲು ಕಟ್ಟಿಕೊಂಡು ಹರಕೆ ತೀರಿಸುವುದು ಇದೆ.

ಆದರೆ ಈ ಬಾರಿ ಯುವತಿಯೊಬ್ಬರು ಮರಗಾಲು ಕಟ್ಟಿಕೊಂಡು ಬರೋಬ್ಬರಿ 400 ಕಿ.ಮೀಟರ್ ಪಾದಯಾತ್ರೆ ಮಾಡಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಮಿನಗಡದಿಂದ – ಶ್ರೀಶೈಲ ವರೆಗೆ ಯುವತಿ ಪಾದಯಾತ್ರೆ ಮಾಡಿದ್ದಾಳೆ.

ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮಿನಗಡ ಗ್ರಾಮದ ಯುವತಿ ಬಸವಪ್ರಿಯಾ ಎಂಬುವವರು ಕಳೆದ ಮೂರು ವರ್ಷಗಳಿಂದ ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿದ್ದಾರೆ. ಆದರೆ ಈ ಬಾರಿ ಯುವತಿ ಮರಗಾಲು ಕಟ್ಟಿಕೊಂಡು ಪಾದಯಾತ್ರೆ ಮಾಡಿದ್ದಾಳೆ.

ಯುವತಿಯ ಈ ನಡೆಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಪುರುಷರಿಗೆ ನಾವೇನು ಕಡಿಮೆ ಇಲ್ಲ ಎಂಬುದನ್ನು ಈ ಯುವತಿ ತೋರಿಸಿಕೊಟ್ಟಿದ್ದಾಳೆ ಎಂದು‌ ನೆಟ್ಟಿಗರು ಕೊಂಡಾಡಿದ್ದಾರೆ. ಸಧ್ಯ ಇವರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.

Advertisement

Leave a reply

Your email address will not be published. Required fields are marked *

error: Content is protected !!