Select Page

Advertisement

ಶರದ್ ಪವಾರ್ ಆರೋಗ್ಯದಲ್ಲಿ ‌ಏರುಪೇರು ; ಆಸ್ಪತ್ರೆಗೆ ದಾಖಲು

ಶರದ್ ಪವಾರ್ ಆರೋಗ್ಯದಲ್ಲಿ ‌ಏರುಪೇರು ; ಆಸ್ಪತ್ರೆಗೆ ದಾಖಲು



ಮುಂಬೈ : ಎಸ್ ಸಿ ಪಿ ನಾಯಕ ಶರದ್ ಪವಾರ್ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು ಅವರನ್ನು ಪುಣೆಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

85 ವರ್ಷದ ಶರದ್ ಪವಾರ್ ಅವರು ಪುಣೆಯ ರೂಬಿ ಕ್ಲಿನಿಕ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ಗಂಟಲು ನೋವು ಹಾಗೂ ಕೆಮ್ಮಿನಿಂದ ಬಳಲುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಸಧ್ಯ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಶರದ್ ಪವಾರ್ ಅವರ ಸಹೋದರನ ಪುತ್ರ ಅಜಿತ್ ಪವಾರ್ ವಿಮಾನ ಅಪಘಾತದಲ್ಲಿ ನಿಧನರಾಗಿದ್ದು ಆ ನೋವಿನಲ್ಲೇ ಪವಾರ್ ಕುಟುಂಬವಿದೆ.

Advertisement

Leave a reply

Your email address will not be published. Required fields are marked *

error: Content is protected !!