ಸವದತ್ತಿ : ಯಲ್ಲಮ್ಮನ ದೇವಸ್ಥಾನಕ್ಕೆ ನುಗ್ಗಿದ ನೀರು, ಒದ್ದೆಯಾದ ಕಾಣಿಕೆ ಹಣ ಒಣಗಿಸಲು ಹರಸಾಹಸ
ಸವದತ್ತಿ : ಶಕ್ತಿ ದೇವತೆ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ದೇವಿಗೆ ಭಕ್ತರು ಹಾಕಿರುವ ಕಾಣಿಕೆ ಹಣ ಒದ್ದೆಯಾಗಿದ್ದು, ಸಿಬ್ಬಂದಿ ಹಣ ಒಣಗಿಸಲು ಹರಸಾಹಸ ಪಡುತ್ತಿದ್ದಾರೆ.
ಕಳೆದ ಶುಕ್ರವಾರ ಸುರಿದ ಮಳೆಯಿಂದ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ನೀರು ನುಗ್ಗಿತ್ತು. ಸುಮಾರು ಮೂರು ಅಡಿಯಷ್ಟು ನೀರು ಹೊಕ್ಕ ಪರಿಣಾಮ ದೇವಸ್ಥಾನದ ಹುಂಡಿ ಸಂಪೂರ್ಣ ಮುಳುಗಿತ್ತು.
ಸಧ್ಯ ಒದ್ದೆಯಾಗಿರುವ ಹಣವನ್ನು ದೇವಸ್ಥಾನದ ಸಿಬ್ಬಂದಿ ಒಣಗಿಸುವ ಕಾರ್ಯದಲ್ಲಿ ಸಿಬ್ಬಂದಿ ತೊಡಗಿಕೊಂಡಿದ್ದಾರೆ. ಈಗಾಗಲೇ ದೇವಸ್ಥಾನ ಸ್ವಚ್ಛತೆ ಕಾರ್ಯ ಮುಕ್ತಾಯವಾದ ಹಿನ್ನಲೆಯಲ್ಲಿ ಭಕ್ತರು ದೇವರ ದರ್ಶನ ಪಡೆದುಕೊಳ್ಳುತ್ತಿದ್ದಾರೆ.



