ಯಲ್ಲಮ್ಮನ ಸನ್ನಿಧಿಯಲ್ಲೇ ಮಹಿಳೆಯರಿಗೆ ಅಪಮಾನ ಅರೋಪ ; ಸಿಡಿದೆದ್ದ ಬಂಜಾರ ಮಹಿಳೆಯರು
ಸವದತ್ತಿ : ಅಂಗಡಿ ತೆರವು ಕಾರ್ಯಾಚರಣೆಗೆ ಸಂಬಂಧಿಸಿದಂತೆ ಸವದತ್ತಿ ಯಲ್ಲಮ್ಮ ದೇವಸ್ಥಾನ ಆಡಳಿತ ಅಧಿಕಾರಿ ನಮ್ಮ ಹೆಣ್ಣುಮಕ್ಕಳನ್ನು ಕೆಟ್ಟ ಪದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ಮಳಿಗೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಸವದತ್ತಿ ಯಲ್ಲಮ್ಮ ದೇವಸ್ಥಾನದ ಆವರಣದಲ್ಲಿ ನಡೆದಿದೆ.
ಹೌದು ಅಭಿವೃದ್ಧಿ ಕಾಮಗಾರಿ ಹಿನ್ನಲೆಯಲ್ಲಿ ಸವದತ್ತಿ ದೇವಸ್ಥಾನ ಆವರಣದಲ್ಲಿನ ಮಳಿಗೆಗಳನ್ನು ತೆರವು ಮಾಡಲಾಗುತ್ತಿದೆ. ಈ ಹಿಂದೆ ನೆಲಸಮ ಮಾಡುದ್ದ ಮಳಿಗೆಗಳ ಮಾಲಿಕರಿಗೆ ಹೊಸ ಮಳಿಗೆ ನೀಡುವ ಭರವಸೆ ಕುರಿತು ಜನ ಪ್ರಶ್ನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಜನರಿಗೆ ಯಲ್ಲಮ್ಮ ಗುಡ್ಡ ಅಭಿವೃದ್ಧಿ ಪ್ರಾಧಿಕಾರ ಆಯುಕ್ತ ನಮ್ಮ ಸಮುದಾಯದ ಮಹಿಳೆಯರಿಗೆ ಅಶ್ಲೀಲವಾಗಿ ನಿಂದನೆ ಮಾಡಿದ್ದು, ಕೂಡಲೇ ಅಧಿಕಾರಿ ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ. ಇಲ್ಲವಾದರೆ ನಾವು ಜಾತಿ ನಿಂದನೆ ಪ್ರಕರಣ ದಾಖಲಿಸಿ ಅಧಿಕಾರಿಗಳನ್ನು ಇಲ್ಲಿಂದ ಕಳುಹಿಸುವ ವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಸಾವಿರಾರು ಜನ ಪಟ್ಟು ಹಿಡಿದಿದ್ದಾರೆ.


