ಸವದತ್ತಿ : ಭ್ರಷ್ಟಾಚಾರ ಆರೋಪ ಹೊತ್ತ ಪಿಡಿಒ ವಿರುದ್ಧ ಕ್ರಮ ಯಾಕಿಲ್ಲ..!
ಸವದತ್ತಿ : ಯರಗಟ್ಟಿ ತಾಲೂಕಿನ ಮಾಡಮಗೇರಿ ಗ್ರಾಮ ಪಂಚಾಯತಿ ಸದಸ್ಯರ 14 ತಿಂಗಳ ಗೌರವಧನ ದುರ್ಬಳಕೆ ಮಾಡಿಕೊಂಡ ಆರೋಪ ಹೊತ್ತ ಪಿಡಿಒ ರಕ್ಷಣೆಗಾಗಿ ತಾಲೂಕು ಮಟ್ಟದ ಹಿರಿಯ ಅಧಿಕಾರಿಗಳು ರಕ್ಷಣೆ ಮಾಡುತ್ತಿದ್ದಾರೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ.
ಮಾಡಮಗೇರಿ ಗ್ರಾಮ ಪಂಚಾಯತಿಗೆ ಸಂಬಂಧಿಸಿದಂತೆ ಕಳೆದ 2021 ರಿಂದ 25 ವರೆಗೆ ಗ್ರಾಮ ಪಂಚಾಯತಿ ಸದಸ್ಯರಿಗೆ 16 ಲಕ್ಷ ರೂ. ಬಿಡುಗಡೆಯಾಗಿತ್ತು. ಇದರಲ್ಲಿ ಸದಸ್ಯರಿಗೆ ಕೇವಲ 10 ಲಕ್ಷ ರೂ. ಗೌರವಧನ ಮಾತ್ರ ಬಿಡುಗಡೆ ಮಾಡಿದ್ದು, ಖಾತೆಯಲ್ಲಿ ಕೇವಲ 2 ಲಕ್ಷ ರೂ. ಹಣ ಉಳಿಸಿದ್ದು ಉಳಿದ ಮೂರು ಲಕ್ಷ ರೂ.ಗಳ ವ್ಯತ್ಯಾಸ ಕಂಡುಬಂದಿತ್ತು.
ಈ ಪ್ರಕರಣ ಕುರಿತು ಸವದತ್ತಿ ತಾಲೂಕು ಪಂಚಾಯಿತಿ ಸಹಾಯಕ ಲೆಕ್ಕಾಧಿಕಾರಿಗಳು ಹಾಗೂ ವಿಷಯ ನಿರ್ವಾಹಕರು ತನಿಖೆ ನಡಿಸುವ ಮೂಲಕ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ವರದ ನೀಡಿದ್ದರು. ವರದಿ ಹಿನ್ನಲೆಯಲ್ಲಿ ಲಕ್ಷಾಂತರ ಹಣ ದುರ್ಬಳಕೆ ಆರೋಪದ ಕುರಿತು ಮಾಡಮಗೇರಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಯಲ್ಲವ್ವ ಶೇರಿ ವಿರುದ್ಧ ಕ್ರಮಕ್ಕೆ ಶಿಪಾರಸ್ಸು ಮಾಡಲಾಗಿತ್ತು.
ಸಧ್ಯ ಭ್ರಷ್ಟಾಚಾರ ಆರೋಪ ಹೊತ್ತ ಪಿಡಿಒ ವಿರುದ್ಧ ಕ್ರಮಕ್ಕೆ ಮುಂದಾಗಬೇಕಾದ ತಾಲೂಕು ಮಟ್ಟದ ಅಧಿಕಾರಿಗಳು ಅಧಿಕಾರ ದುರ್ಭಳಕೆ ಮಾಡಿಕೊಂಡು ಪಿಡಿಒ ರಕ್ಷಣೆಗೆ ಮುಂದಾಗಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಅಷ್ಟೇ ಅಲ್ಲದೆ ಪಿಡಿಒ ಯಲ್ಲವ್ವ ಶೇರಿ ಪ್ರಕರಣ ಮುಚ್ಚಿ ಹಾಕುವ ತಂತ್ರವೂ ಇದರ ಹಿಂದಿದೆ ಎಂದು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ.
ಲೋಕಸಭೆ ಚುನಾವಣೆ ನೀತಿ ಸಂಹಿತೆ ಸಂದರ್ಭದಲ್ಲಿ ಹಿಂದೆ ತಾಪಂನ ಕೆಲ ಅಧಿಕಾರಿಗಳು, ಪಿಡಿಒ ವಿರುದ್ಧ ಅನಧಿಕೃತ ಬಡಾವಣೆ ನಿರ್ಮಿಸಲು ಅನುಮತಿ ನೀಡಿರುವ ಆರೋಪ ಕೇಳಿಬಂದಿತ್ತು. ಆದರೆ ಈ ಪ್ರಕರಣ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿರುವ ಕಾರಣಕ್ಕೆ ಅನಧಿಕೃತ ಬಡಾವಣೆ ನಿರ್ಮಿಸಲು ನೀಡಿದ್ದ ಪರವಾನಗಿ ರದ್ದು ಮಾಡಲಾಗಿತ್ತು. ಅದು ಕೂಡ ಲೋಕಾಯುಕ್ತ ತನಿಖೆ ಹಂತದಲ್ಲಿ ದೆ ಎಂದು ಗ್ರಾಪಂ ಸದಸ್ಯರು ದೂರಿದ್ದಾರೆ.


