ವಿಜೃಂಭಣೆಯಿಂದ ಜರುಗಿದ ಶ್ರೀ ನೀಲಗುಂದೇಶ್ವರ ರಥೋತ್ಸವ
ಬೆನಕಟ್ಟಿ : ಎತ್ತ ನೋಡಿದರು ಶಿವನ ಸ್ಮರಣೆ. ಹರ ಹರ ಮಹಾದೇವ ಜಯಘೋಷದ ಮಧ್ಯೆ ಶ್ರೀ ನೀಲಗುಂದೇಶ್ವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ದವನದ ಹುಣ್ಣಿಮೆ ಅಂಗವಾಗಿ ಮಂಗಳವಾರ ಏ. 23 ರಂದು ಸವದತ್ತಿ ತಾಲೂಕಿನ ಬೆನಕಟ್ಟಿ ಗ್ರಾಮದ ಶ್ರೀ ನೀಲಗುಂದೇಶ್ವರ ಜಾತ್ರೆಯು ಬೆಳಿಗ್ಗೆ 8 ಗಂಟೆಗೆ ರುದ್ರಾಭಿಷೇಕದೂಂದಿಗೆ ಪ್ರಾರಂಭವಾಯಿತು.
ಮದ್ಯಾಹ್ನ 12:30 ಗಂಟೆಗೆ ಮಹಾಪ್ರಸಾದ ಜರುಗಿತು, ಸಂಜೆ 5 ಗಂಟೆಗೆ ರಥೋತ್ಸವದಲ್ಲಿ ಶ್ರೀ ನೀಲಗುಂದೇಶ್ವರ ಮೂರ್ತಿಯನ್ನು ಪ್ರತಿಷ್ಟಾಪಿಸಲಾಯಿತು, 5:30ಕ್ಕೆ ರಥೋತ್ಸವು ನೂರಾರು ಭಕ್ತರ ಮಧ್ಯೆ ಹರ ಹರ ಮಹಾದೇವ ಎಂಬ ಘೋಷಣೆಯಲ್ಲಿ ಜರುಗಿತು.
ಭಕ್ತರು ಭಕ್ತಿಯಿಂದ ಉತ್ತತ್ತಿ(ಕಾರಿಕ) ಬಾಳೆಹಣ್ಣು ಸಮರ್ಪಿಸಿದರು.


