ಸಾಹುಕಾರ್ ಸುತ್ತಾಡಲು ಸಜ್ಜಾದ ಸಾರಥಿ ; ಜೊತೆಯಾಗಲಿದೆ ನೂತನ ಹೆಲಿಕಾಪ್ಟರ್
ಬೆಳಗಾವಿ : ಲೋಕೋಪಯೋಗಿ ಹಾಗೂ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ನೂತನ ಹೆಲಿಕಾಪ್ಟರ್ ವೀಕ್ಷಣೆ ಮಾಡಿದ್ದು, ಕೆಲವೇ ದಿನಗಳಲ್ಲಿ ಹೊಸ ಅತಿಥಿಯ ಆಗಮನ ಆಗಲಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಸಮೀಪದ ಜಕ್ಕೂರು ಏರೋಡ್ರೋಮ್‌ನಲ್ಲಿ ನೂತನ ಹೆಲಿಕಾಪ್ಟರ್ ಅನ್ನು ಸಚಿವ ಸತೀಶ್ ಜಾರಕಿಹೊಳಿ ಪರಿಶೀಲಿಸಿದ್ದಾರೆ. ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.


