ಸಾಹುಕಾರ್ ಸಿಟ್ಟಿಗೆ ತಲೆಬಾಗಿದರಾ ಡಿ.ಕೆ ಸಹೋದರರು…!
ರಾಜ್ಯ ರಾಜಕಾರಣದಲ್ಲಿ ಭವಿಷ್ಯದ ಸಿಎಂ ಎಂದೇ ಬಿಂಬಿತವಾಗಿರುವ ಡಿ.ಕೆ ಶಿವಕುಮಾರ್ ಹಾಗೂ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ನಡುವೆ ಇದ್ದ ಶೀತಲ ಸಮರಕ್ಕೆ ನಾಂದಿ ಹಾಡಲು ಸಜ್ಜಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಕೆಶಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂಬ ವಿಚಾರವಾಗಿ ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅಸಮಾಧಾನ ಹೊಂದಿದ್ದರು ಎಂದು ಹೇಳಲಾಗುತ್ತಿತ್ತು. ಈ ಕುರಿತು ಬಹಿರಂಗವಾಗಿಯೇ ನಮ್ಮಲ್ಲಿ ಕೆಲ ಗೊಂದಲಗಳಿವೆ ಎಂದು ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು.
ಸತೀಶ್ ಜಾರಕಿಹೊಳಿ ತಮ್ಮ ಆಪ್ತ ಶಾಸಕರ ಬಳಗದ ಜೊತೆ ಮೈಸೂರು ಪ್ರವಾಸ ಹಮ್ಮಿಕೊಳ್ಳುತ್ತಿದ್ದಾರೆ ಎಂಬ ವಿಷಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ನಂತರ ಡಿಕೆಶಿ ತಡೆ ಹಿಡಿದ ಕಾರಣ ಹೈಕಮಾಂಡ್ ಸೂಚನೆಯಂತೆ ಪ್ರವಾಸ ಕೈಬಿಡುವ ನಿರ್ಧಾರವನ್ನು ಸತೀಶ್ ಮಾಡಿದ್ದರು ಎಂದು ಹೇಳಲಾಗುತ್ತಿತ್ತು.
ಮತ್ತೊಮ್ಮೆ ಕಾಂಗ್ರೆಸ್ ಮುಖಂಡರಿಗೆ ಟಕ್ಕರ್ ನೀಡಿಲು ಹೊರಟಿದ್ದ ಸತೀಶ್ ಜಾರಕಿಹೊಳಿ ದುಬೈ ಪ್ರವಾಸ ಮಾಡಲು ಸಜ್ಜಾಗುವ ಮೂಲಕ ಡಿಕೆಶಿ ನಡೆಗೆ ಬಹಿರಂಗವಾಗಿ ವಿರೋಧ ಮಾಡಿದ್ದರು. ಆದರೆ ಸ್ವತಃ ಸಿದ್ದರಾಮಯ್ಯ ಅವರ ಸೂಚನೆ ಮೇರೆಗೆ ಅವರು ಪ್ರವಾಸ ರದ್ದು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ ಬುಧವಾರ ಡಿಕೆಶಿ ಹೈಕಮಾಂಡ್ ಭೇಟಿ ಮಾಡುವ ಮುಂಚೆಯೇ ಬೆಳ್ಳಂ ಬೆಳಿಗ್ಗೆ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಜೊತೆಗೆ ಸತೀಶ್ ಜಾರಕಿಹೊಳಿ ನಡುವೆ ಇದ್ದ ಮುನಿಸು ಮರೆತು ಒಂದಾಗುವ ಮಾತುಕತೆ ನಡೆದಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲದೆ ಡಿಕೆಶಿ ಸತೀಶ್ ಜಾರಕಿಹೊಳಿ ಅವರ ಜೊತೆ ಗುದ್ದಾಟ ಬಿಟ್ಟು ಸಂಧಾನಕ್ಕೆ ಇಳಿದಿದರಾ ಎಂಬ ಮಾತು ಕೇಳಿಬರುತ್ತಿವೆ.
ಡಿಕೆಶಿ ಗುರುವಾರ ಸಚಿವರ ಜೊತೆ ಮೀಟಿಂಗ್ ಮಾಡಿದ್ದು ಇದಾದ ನಂತರ ಸಹೋದರ ಡಿ.ಕೆ ಸುರೇಶ್ ಕೂಡಾ ಸಚಿವ ಸತೀಶ್ ಜಾರಕಿಹೊಳಿ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಸಧ್ಯ ಸಿಎಂ ಬದಲಾವಣೆ ಕೂಗು ಎಲ್ಲೆಡೆ ಜೋರಾಗುತ್ತಿದ್ದಂತೆ ಇತ್ತ ಪ್ರಭಲ ರಾಜಕೀಯ ಎದುರಾಳಿಗಳ ಜೊತೆ ಸಂಧಾನಕ್ಕೆ ನಿಂತಿರಾ ಡಿಕೆ ಸಹೋದರರು ಎಂಬ ಮಾತಾಗಿದೆ.
ಒಟ್ಟಿನಲ್ಲಿ ಬೆಳಗಾವಿ ಸಾಹುಕಾರರ ಸಿಟ್ಟಿಗೆ ಬಲಿಯಾಗಿ ಅವಕಾಶ ಕಳೆದುಕೊಳ್ಳುವುದಕ್ಕಿಂದ ಸಂಧಾನ ಮಾಡಿಕೊಂಡು ಸಾಗುವುದೇ ಒಳಿತು ಎಂಬ ಎಕ್ಕಾಚಾರಕ್ಕೆ ಡಿಕೆಶಿ ಸಹೋದರರು ಬಂದಂತಿದೆ.


